ಬೆಂಗಳೂರು: ರೇವಾ ವಿಶ್ವವಿದ್ಯಾಲಯವು ಐಬಿಎಂ (IBM) ಸಹಯೋಗದೊಂದಿಗೆ ಅಕ್ಟೋಬರ್ 14 ಮತ್ತು 15ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ, 5ನೇ ಸೆಮಿಸ್ಟರ್ ಸಿಎಸ್ಇ (IoT) ವಿಭಾಗದ ವಿದ್ಯಾರ್ಥಿನಿ ಅಫ್ನಾಜ್ ದ್ವಿತೀಯ ಸ್ಥಾನ (First Runner-up) ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಡಿಕೆಯಸ್ಸಿ ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನ್ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಅಫ್ನಾಜ್, ಎರಡೂ ಹಂತಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. ಪ್ರಸ್ತುತ ಯೇನಪೋಯ ಕಾಲೇಜಿನಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಡಿಕೆಯಸ್ಸಿ ಕೇಂದ್ರ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಅಜಿಲಮೊಗರು (ದಮ್ಮಾಂ, ಸೌದಿ ಅರೇಬಿಯಾ) ಅವರ ಪುತ್ರಿಯಾಗಿರುವ ಅಫ್ನಾಜ್ ಅವರ ಈ ಸಾಧನೆಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.
ಅಫ್ನಾಜ್ ಅವರು ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾ, ಸಮಾಜ ಮತ್ತು ಸಮುದಾಯಕ್ಕೆ ಮಾರ್ಗದರ್ಶಕಿಯಾಗಿ ಬೆಳೆಯಲಿ ಎಂದು ಹಾರೈಸಿರುವ ಡಿಕೆಯಸ್ಸಿ ವಲಯದವರು, ಅಲ್ಲಾಹು ಅವರಿಗೆ ಜ್ಞಾನ, ಯಶಸ್ಸು ಹಾಗೂ ಉಜ್ವಲ ಭವಿಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
























All the Best & Allah bless to All