ಬಂಟ್ವಾಳ :- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ಜೆಡಿಎಸ್ ಘಟಕವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ಬಂಟ್ವಾಳ ತಾಲೂಕಿನಾದ್ಯಂತ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು , ಸಮಾನ ಮನಸ್ಕ ಪಕ್ಷಗಳೊಂದಿಗೆ ಕೂಡಿ ಜಾತ್ಯಾತೀತ ಮತಗಳು ಹಂಚಿಹೋಗದಂತೆ ತಡೆಯುವ ಏಕೈಕ ಉಧ್ಧೇಶದಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯಾದಂತಹ ಪದ್ಮರಾಜ್ ರಾಮಯ್ಯ ಪೂಜಾರಿಯವರನ್ನು ಆಯ್ಕೆಮಾಡಲು ಬಂಟ್ವಾಳ ತಾಲೂಕು ಜೆಡಿಎಸ್ ಮೈನಾರಿಟಿ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಶಫೀಕ್ ಆಲಡ್ಕ ಪಕ್ಷ ದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಬ್ರಿಜೇಶ್ ಚೌಟ ಈ ಹಿಂದೆ ಸಮಾರಂಭವೊಂದರಲ್ಲಿ, ಮತೀಯ ವಿಷಯ ದ ಬಗ್ಗೆ ಹಲವಾರು ಬಾರಿ ಸಭೆ ಸಮಾರಂಭ ಗಳಲ್ಲಿ ವಿಚಾರದ ಬಗ್ಗೆ ಪ್ರತಿಪಾದಿಸಿದ್ದು, ಜಾತ್ಯಾತೀತ ಒಳವುಲ್ಲ ಜೆಡಿಎಸ್ ಕಾರ್ಯಕರ್ತರಿಗೆ ಇದರಿಂದ ತೀವ್ರ ನೋವಾಗಿದ್ದು , ಜಿಲ್ಲೆಯ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಗಮಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆಯೆಂದು ಅವರು ಈ ಸಂಧರ್ಭ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.