janadhvani

Kannada Online News Paper

ಕೆಸಿಎಫ್ ದುಬೈ ನೋರ್ತ್ ಝೋನ್: ದಾರುಲ್ ಅಮಾನ್ ವಸತಿ ಯೋಜನೆಗೆ ಶಿಲಾನ್ಯಾಸ

ಕೆಸಿಎಫ್ ಯುಎಇ ದಶವಾರ್ಷಿಕ ಪ್ರಯುಕ್ತ ಹಮ್ಮಿಕೊಳ್ಳಲಾದ 10 ಉಚಿತ ಮನೆ ನಿರ್ಮಾಣ ಯೋಜನೆಗಳಲ್ಲಿ ಮುಖ್ಯವಾದ ಯೋಜನೆ ದಾರುಲ್ ಅಮಾನ್ ವಸತಿ ನಿರ್ಮಾಣದಲ್ಲಿ 8ನೇ ಮನೆಗೆ KCF ದುಬೈ ನಾರ್ತ್ ಝೋನ್ ಪ್ರಾಯೋಜಿಕತ್ವದಲ್ಲಿ 10/03/2024 ಬೆಳಿಗ್ಗೆ 8.30ಕ್ಕೆ ಮಂಗಳೂರಿನ ಮೊಂಟೆಪದವಿನಲ್ಲಿ ಶಿಲಾನ್ಯಾಸ ಮಾಡಲಾಯಿತು.

ಬಹು ಸೆಯ್ಯಿದ್ ಶಂಸುದ್ದೀನ್ ತಂಗಳ್ ಗಾಂದಿನಗರ ಶಿಲಾನ್ಯಾಸ ನೆರವೇರಿಸಿದರು.
ಕೆಸಿಎಫ್ ಹಿರಿಯ ನಾಯಕರಾದ ಮೆಹಬೂಬ್ ಸಖಾಫಿ ಕಿನ್ಯ, ಇಬ್ರಾಹಿಂ ಹಾಜಿ ಕೋಲ್ನಾಡು, ಸ್ಥಳೀಯ ಎಸ್ಎಸ್ಎಫ್, ಎಸ್ ವೈ ಎಸ್ ಇತರ ಸುನ್ನಿ ಸಂಘಟನಾ ಕಾರ್ಯಕರ್ತರು ಭಾಗವಹಿಸಿದರು.

error: Content is protected !! Not allowed copy content from janadhvani.com