ಬೋಳಂತೂರು ನಾರಂಕೋಡಿ ತಾಜುಲ್ ಉಲಮಾ ಮದ್ರಸದಲ್ಲಿ ದಿನಾಂಕ:- 09 -02 -2024 ಶುಕ್ರವಾರ ಸಂಜೆ 4.30 ಕ್ಕೆ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ಟಿ.ಯು ಮದರಸ ವಠಾರ ನಾರಂಕೋಡಿಯಲ್ಲಿ ನಡೆಯಲಿದೆ.
ಸಂಜೆ 4.30 ಕ್ಕೆ – ಶೈಖುನಾ ಬೊಳ್ಮಾರ್ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದ್ ರವರ ನೇತೃತ್ವದಲ್ಲಿ ಮರ್ ಹೂಂ ಶೈಖುನಾ ಸುರಿಬೈಲ್ ಉಸ್ತಾದ್ ರವರ ಮಖ್ ಬರ ಝಿಯಾರತ್ ನಡೆಯಲಿದೆ.
ಸಂಜೆ 5 ಕ್ಕೆ- ಸುಲೈಮಾನ್ ಸಖಾಫಿ, ಖತೀಬರು ಬೋಳಂತೂರು ಇವರ ನೇತೃತ್ವದಲ್ಲಿ ತಾಜುಲ್ ಉಲಮಾ ಮೌಲಿದ್ ಮಜ್ಲಿಸ್ ನಡೆಯಲಿದೆ.
ಸಂಜೆ 7.00ಕ್ಕೆ ಹಮೀದ್ ಮದನಿ, ಸದರ್ ಮುಅಲ್ಲಿಂ ನಾರಂಕೋಡಿ ಇವರ ನೇತೃತ್ವದಲ್ಲಿ ಬದ್ರಿಯತ್ ಮಜ್ಲಿಸ್ ನಡೆಯಲಿದೆ.
ರಾತ್ರಿ ಗಂಟೆ 8 ಕ್ಕೆ ಅಸ್ಸಯ್ಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ರವರ ನೇತೃತ್ವದಲ್ಲಿ ಅನುಸ್ಮರಣಾ ಸಮ್ಮೇಳನ ನಡೆಯಲಿದೆ. ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಉದ್ಘಾಟಿಸಲಿದ್ದಾರೆ.
ಬಹು! ನೌಫಲ್ ಸಖಾಫಿ ಕಳಸ, ದ್ಸಿಕ್ರಾ ಮೂಡಬಿದ್ರೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಬ್ದುಲ್ಲಾ ನಾರಂಕೋಡಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಿ.ಹೆಚ್ ಮಹಮ್ಮದಲಿ ಸಖಾಫಿ ಅಶ್ ಅರಿಯ್ಯ ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿ.ಎಂ ಅಬೂಬಕ್ಕರ್ ಲತೀಫಿ ಎಣ್ಮೂರು, ಅಲ್ ಹಾಜಿ ಸುಲೈಮಾನ್ ಮುಸ್ಲಿಯಾರ್ ನಾರ್ಶ, ಎಂ. ಎಸ್ ಮಹಮ್ಮದ್ , ಅಬ್ಬಾಸ್ ಅಲಿ ಬೋಳಂತೂರು, ಇಬ್ರಾಹೀಂ ನವಾಝ್ ಬಡಕಬೈಲ್, ಶಾಕೀರ್ ಬಡಕಬೈಲ್, ರಝಾಕ್ ಕುಕ್ಕಾಜೆ, ಲತೀಫ್ ಪರ್ತಿಪ್ಪಾಡಿ, ಯಾಕೂಬ್ ದಂಡೆಮಾರ್ , ಅನ್ಸಾರ್ ಬಿ.ಜಿ, ಹಾಗೂ ಅಶ್ರಫ್ ಸುರಿಬೈಲ್ ಇವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮದ್ರಸ ರಂಗದಲ್ಲಿ ಸುಮಾರು 51 ವರ್ಷ ಸೇವೆ ಸಲ್ಲಿಸಿದ ಅಲ್ ಹಾಜಿ ಸುಲೈಮಾನ್ ಮುಸ್ಲಿಯಾರ್ ನಾರ್ಶ, ದಾರುಲ್ ಅಶ್ ಅರಿಯ್ಯ ವಿದ್ಯಾ ಸಂಸ್ಥೆಯ ಮೆನೇಜರ್ ಆಗಿ 22 ವರ್ಷಗಳಿಂದ ಸೇವೆಸಲ್ಲಿಸಿದ ಮುಹಮ್ಮದಲಿ ಸಖಾಫಿ ಉಸ್ತಾದ್, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್ ಹಾಗೂ ತಾಜುಲ್ ಉಲಮಾ ಮದ್ರಸದ ಹಿರಿಯ ಸದಸ್ಯರಾದ ಇಬ್ರಾಹೀಂ ನಾರಂಕೋಡಿಯವರನ್ನು ಸನ್ಮಾನಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಕನ್ವೀನರ್ ಝಕರಿಯಾ ನಾರ್ಶ ಪ್ರಕಟನೆಗೆ ತಿಳಿಸಿದ್ದಾರೆ.

















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ