ಕುಂದಾಪುರ ತಾಲೂಕು ಮಾವಿನಕಟ್ಟೆಯಲ್ಲಿ ಪತಿಯನ್ನು ಕಳೆದು ಕೊಂಡ ಬಡ ಕುಟುಂಬವೊಂದರ ಅಪೂರ್ಣಗೊಂಡ ಮನೆಯ ಪುನರ್ ನಿರ್ಮಾಣ ಕಾರ್ಯವು ಫಝಲ್ ನೇರಳಕಟ್ಟೆ, ಸಮೀಉಲ್ಲಾ ಹಾಗೂ ಅಬ್ದುಲ್ ಶುಕೂರ್ ಬೆಳ್ವೆ ಇವರ ನೇತೃತ್ವದಲ್ಲಿ ನಡೆಯುತ್ತಿದ್ದು, ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಹಾಗೂ ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ ಜಂಟಿಯಾಗಿ 35 ಸಾವಿರ ರೂಪಾಯಿ ಸಹಾಯಧನವನ್ನು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ಮನೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ ಫಝಲ್ ನೇರಳಕಟ್ಟೆ ಇವರಿಗೆ ಹಸ್ತಾಂತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರು ಹಾಗು ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ ಬೆಳ್ವೆ ಇದರ ಅಧ್ಯಕ್ಷ ರಾದ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದರು.
ಸಮಾರಂಭ ದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಟಿ ಎಮ್ ಎಚ್ ಟ್ರಸ್ಟೀ ಹುಸೇನ್ ಹೈಕಾಡಿ.ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಹಾಗೂ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರ್. ಟ್ರಸ್ಟಿಗಳಾದ ಅನ್ಸಾರ್ ಹೊಸಂಗಡಿ.ಪೀರ್ ಸಾಹೇಬ್ ಉಡುಪಿ. ಅರ್ಫಾತ್, ನಜೀರ್ ಶಾ ಅಜೆಕಾರ್, ಟ್ರಸ್ಟ್ ಕೋಶಾಧಿಕಾರಿ ಆಸೀಫ್ ಅಲ್ಬಾಡಿ. ಅನಿವಾಸಿ ಭಾರತೀಯ ಬೆಳ್ವೆ ಮಯ್ಯಧಿ ಬಹರೈನ್, ಬೆಳ್ವೆ ಮಸೀದಿಯ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ,ಜುಮ್ಮ ಮಸೀದಿ ಬೆಳ್ವೆ ಅಧ್ಯಕ್ಷರಾದ ಅಹಮದ್ ಭ್ಯಾರಿ ಇನ್ನಿತರರು ಉಪಸ್ಥಿತರಿದ್ದರು.