janadhvani

Kannada Online News Paper

ಕಾರ್ಮಿಕರ ವೇತನ ವಿಳಂಬ- 164 ಕಂಪನಿಗಳ ವಿರುದ್ದ ಕಾನೂನು ಕ್ರಮ

ಅಬುಧಾಬಿ: ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ವಿಳಂಬ ಉಂಟುಮಾಡಿದ 164 ಕಂಪನಿಗಳ ವಿಚಾರಣೆಯನ್ನು ಪ್ರೋಸಿಕ್ಯೂಷನ್‌ಗೆ ವರ್ಗಾಯಿಸಲಾಗಿದೆ.

ಎರಡು ತಿಂಗಳುಗಳಿಗಿಂತ ಹೆಚ್ಚಿನ ಸಂಬಳವನ್ನು ಪಾವತಿಸದಿರುವ ಕಂಪನಿಗಳು ಕಾನೂನು ಕ್ರಮವನ್ನು ಎದುರಿಸುತ್ತಿವೆ.

ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯದ ನೇತೃತ್ವದಲ್ಲಿರುವ ಮಾನವ ಕಳ್ಳಸಾಗಣೆಗಳ ರಕ್ಷಣಾ ಸಮಿತಿಯ ವಾರ್ಷಿಕ ವರದಿಯಲ್ಲಿ, ಸಂಬಳ ಪಾವತಿಸಲು ವಿಫಲವಾದ ಸಂಸ್ಥೆಗಳಿಗೆ ಸಂಬಧಪಟ್ಟ ಕಡತಗಳನ್ನು ಪ್ರೋಸಿಕ್ಯೂಷನ್‌ಗೆ ಹಸ್ತಾಂತರಿಸಿದ  ವಿವರಗಳಿವೆ.

ವೇತನ ಲಭಿಸದೆ ಸಂಕಷ್ಟಕ್ಕೀಡಾದ ಕಾರ್ಮಿಕರನ್ನು ತಾಯ್ನಾಡಿಗೆ ಕಳುಹಿಸುವುದು ಸಮೇತ ಕಾರ್ಯಗಳನ್ನು ಕ್ರಮೀಕರಿಸಲು ಸಮಿತಿಯು ಕಳೆದ ವರ್ಷ ಒಟ್ಟು 2.7 ಮಿಲಿಯನ್ ದಿರ್ಹಮ್ ಗಳನ್ನು ವ್ಯಯಿಸಿದೆ ಎಂದು ಸಮಿತಿಯು ಹೇಳಿದೆ.ಉದ್ಯೋಗದಾತ ವೀಸಾ ಅರ್ಜಿಗಳನ್ನು ನೀಡಿದಾಗ ಪಾವತಿಸಿದ ಮೊತ್ತವನ್ನು ಈ ಕಾರ್ಯಕ್ಕಾಗಿ ವ್ಯಯಿಸಲಾಗಿದೆ.

ಯುಎಇ ಕಾಯಿದೆ ಪ್ರಕಾರ ಕಾರ್ಮಿಕರಿಗೆ 2 ತಿಂಗಳುಗಳಿಗಿಂದ ವೇತನ ವಿಳಂಬ ಗೊಳಿಸುವುದು ಕಾನೂನು ಬಾಹಿರವಾಗಿದೆ.ಎರಡು ತಿಂಗಳ ವೇತನವನ್ನು ಪಡೆಯದ ನೌಕರರು ಪ್ರಾಯೋಜಕರ ಒಪ್ಪಿಗೆಯಿಲ್ಲದೆ ಇತರ ಸೂಕ್ತ ಸಂಸ್ಥೆಗಳಿಗೆ ವೀಸಾವನ್ನು ಬದಲಾಯಿಸಲು ಅನುಮತಿಯಿದೆ.

ಖಾಸಗಿ ವಲಯದ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು 50,000ಕ್ಕಿಂತ ಹೆಚ್ಚಿನ ಪರಿಶೀಲನೆಗಳನ್ನು ಕಳೆದ ವರ್ಷ ನಡೆಸಲಾಗಿದೆ.

ಮಾನವ ಕಳ್ಳಸಾಗಣೆ ತಡೆಯುವ ಸಲುವಾಗಿ 2013 ರಲ್ಲಿ ಯುಎಇ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯ್ತು. ಸಂತ್ರಸ್ತರಿಗೆ ಸಹಾಯ ಮತ್ತು ಪುನರ್ವಸತಿಗಾಗಿ 663,206 ದಿರ್ಹಂ ಖರ್ಚು ಮಾಡಲಾಯಿತು.

error: Content is protected !! Not allowed copy content from janadhvani.com