janadhvani

Kannada Online News Paper

ಸೆಲ್ಫ್ ಡಿಸ್ಕೌವರಿ ತರಗತಿ ಮತ್ತು ಡಾ. ಝೈನಿ ಕಾಮಿಲ್ ಉಸ್ತಾದ್ ರಿಗೆ ಸನ್ಮಾನ

ದುಬೈ:-ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಸೆಲ್ಫ್ ಡಿಸ್ಕೌವರಿ ತರಗತಿ ಇತ್ತೀಚೆಗೆ ನಾರ್ತ್ ಝೋನ್ ಕಛೇರಿಯಲ್ಲಿ ನಡೆಯಿತು.
ಸೆಯ್ಯಿದ್ ತ್ವಾಹ ಜಮಲುಲ್ಲೈಲಿ ತಂಙಳ್ ಪ್ರಾರ್ಥನೆ ನೆರೆವೇರೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ಸಭೆಯನ್ನು ಉದ್ಘಾಟನೆ ಮಾಡಿದರು. ಸುನ್ನಿ ಸಂಘಟನಾ ನಾಯಕರಾದ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ತರಗತಿ ನಡೆಸಿದರು.

ಕಳೆದ ಮೂರು ದಶಕಗಳ ಕಾಲ ಭಾಷಣ,ಬರಹ ರಂಗದಲ್ಲಿ ಸಕ್ರೀಯ ವಾಗಿರುವ ಉಸ್ತಾದರನ್ನು ದುಬೈ ನಾರ್ತ್ ಝೋನ್ ವತಿಯಿಂದ ಸನ್ಮಾನಿಸಲಾಯಿತು. ಮುಸ್ತಫಾ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸದರು, ನಿಯಾಝ್ ಬಸರ ಧನ್ಯವಾದವಿತ್ತರು.