ಮಂಗಳೂರು: ಡಿಸೆಂಬರ್ 12 ಗುರುವಾರ ಮಂಗಳೂರಿನ ಪುರಭವನದಲ್ಲಿ ನಡೆಯುವ ವಕ್ಫ್ ಜಾಗೃತಿ ಸಮಾವೇಶದ ಪೂರ್ವಭಾವಿ ಸಿದ್ದತಾ ಸಭೆಯು ಪಡೀಲ್ ಇಲ್ಮ್ ಸೆಂಟರ್ ನಲ್ಲಿ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರಕಾರದ ಮುಸ್ಲಿಂ ಸಮುದಾಯದ ವಕ್ಫ್ ಹಾಗೂ ಇನ್ನಿತರ ಅಲ್ಪಸಂಖ್ಯಾತ ವಿರೋಧಿ ನೀತಿ ವಿರುದ್ಧ ಜಾಗೃತಿ ಸಮಾವೇಶದ ರೂಪುರೇಷೆಯನ್ನು ಮಾಡಲಾಯಿತು.
ಎಸ್ ಎಂ ಎ ನೇತೃತ್ವದಲ್ಲಿ ನಡೆದ ನಾಯಕರ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ
ಪಿ.ಪಿ ಅಹ್ಮದ್ ಸಖಾಫಿ, ಎಸ್.ಪಿ.ಹಂಝ ಸಖಾಫಿ, ಡಾ.ಝೈನೀ ಕಾಮಿಲ್, ಶಾಫಿ ಸಅದಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ, ಕೆಕೆಎಂ ಕಾಮಿಲ್ ಸಖಾಫಿ, ಹಫೀಳ್ ಸಅದಿ , ಇಬ್ರಾಹಿಂ ನಈಮಿ, ಎಂಬಿಎಂಸಾಧಿಕ್ ಮಾಸ್ಟರ್, ಅಶ್ರಫ್ ಕಿನಾರ, ಉಮರ್ ಮಾಸ್ಟರ್, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ,ಇಸ್ಮಾಯಿಲ್ ಸಅದಿ ಕಿನ್ಯ ಉಪಸ್ಥಿತರಿದ್ದರು.