janadhvani

Kannada Online News Paper

ಕುಡಿದ ಮತ್ತಿನಲ್ಲಿ ಪ್ರಯಾಣಿಕನ ಅವಾಂತರ- ಟೇಕಾಫ್ ಆದ ವಿಮಾನ ವಾಪಸ್ ಲ್ಯಾಂಡಿಂಗ್

ಇತರ ಪ್ರಯಾಣಿಕರಿಗೆ ತೊಂದರೆಯಾದ ಕಾರಣ ವಿಮಾನವನ್ನು ವಾಪಸ್ ಇಳಿಸಲಾಯಿತು.

ದುಬೈ: ದುಬೈನಿಂದ ಕೋಝಿಕ್ಕೋಡ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೋರ್ವ ಅವಾಂತರ ಸೃಷ್ಟಿಸಿದ ಕಾರಣ ವಿಮಾನವನ್ನು ವಾಪಸ್ ಇಳಿಸಿದ ಘಟನೆ ನಡೆದಿದೆ. ಪೊಲೀಸರು ಆಗಮಿಸಿ ಪ್ರಯಾಣಿಕನನ್ನು ಕರೆದೊಯ್ದ ನಂತರ ವಿಮಾನವನ್ನು ಮತ್ತೆ ಟೇಕಾಫ್ ಮಾಡಲಾಗಿದೆ.

ಭಾನುವಾರ ನಸುಕಿನ 1:30ಕ್ಕೆ ದುಬೈನಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಫ್ಲೈ ದುಬೈ ವಿಮಾನದಲ್ಲಿ ಕೇರಳದ ವೇಂಗರದ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಗಲಾಟೆ ಎಬ್ಬಿಸಿದ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ. ದುಬೈನಿಂದ ವಿಮಾನ ಟೇಕಾಫ್ ಆದ ಮೇಲೂ ಗಲಾಟೆ ಮಾಡುತ್ತಲೇ ಇದ್ದ. ಇತರ ಪ್ರಯಾಣಿಕರಿಗೆ ತೊಂದರೆಯಾದ ಕಾರಣ ವಿಮಾನವನ್ನು ವಾಪಸ್ ಇಳಿಸಲಾಯಿತು. ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಿ ದುಬೈ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ. ಕರಿಪುರಕ್ಕೆ ಬೆಳಗ್ಗೆ 7ಕ್ಕೆ ತಲುಪಬೇಕಿದ್ದ ವಿಮಾನ 10:30ಕ್ಕೆ ತಲುಪಿದೆ.