janadhvani

Kannada Online News Paper

ಅಲ್ ಮದೀನಾ ಕುವೈಟ್ ನ್ಯಾಷನಲ್ ಕಮಿಟಿ- ಗ್ರ್ಯಾಂಡ್ ಮೌಲಿದ್ ಕಾರ್ಯಕ್ರಮ

ಫರ್ವಾನಿಯ: ಅಲ್ ಮದೀನಾ ಮಂಜನಾಡಿ ಇದರ ಕುವೈಟ್ ನ್ಯಾಷನಲ್ ಕಮಿಟಿ ವತಿಯಿಂದ ಗ್ರಾಂಡ್ ಮೌಲಿದ್ ಕಾರ್ಯಕ್ರಮ ಫಾರ್ವಾನಿಯ ಕೆ. ಸಿ.ಎಪ್ ಕಚೇರಿ ನಲ್ಲಿ 06/10/2023 ರಂದು ಬಹಳ ವಿಜೃಂಭಣೆಯಿಂದ ನಡೆಯಿತು.

ಅಲ್ ಮದೀನಾ ಕುವೈಟ್ ಸಮಿತಿಯ ಅಧ್ಯಕ್ಷರಾದ ಬಹು. ಶಾಹುಲ್ ಹಮೀದ್ ಸಹದಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಜಿ.ಎಮ್ ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಉಮರ್ ಝುಹ್ರಿ,ಬಾದುಶ ಸಖಾಫಿ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು.
ಅಲ್ ಮದೀನಾ ಸೌತ್ ಕೂಡಿನೇಟರ್ ಹಸೈನಾರ್ ಮೊಂಟುಗೋಳಿ ಸ್ವಾಗತಿಸಿದರು. ಉಮರ್ ಝುಹ್ರಿ, ಉಮರುಲ್ ಫಾರೂಕ್ ಸಖಾಫಿ,DKSC ಅಧ್ಯಕ್ಷರರು ಯೂಸುಪ್ ಮಂಚಿಕಲ, ಕೆ.ಸಿ.ಎಫ್ ಕಾರ್ಯದರ್ಶಿ ಯಾಕೂಬ್ ಕಾರ್ಕಳ, ಅಧ್ಯಕ್ಷರು ಹೈದೆರ್ ಪಟ್ಟೋರಿ, ಮಾಹಿನ್ ಸಖಾಫಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಅಲ್ ಮದೀನಾ adviser ಬಹು ಅಬ್ದುಲ್ ರಹ್ಮಾನ್ ಸಖಾಫಿ ಅಲ್ ಮದೀನಾ ಕುವೈಟ್ ಸಮಿತಿಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿದರು.

ಮುಖ್ಯ ಭಾಷಣ ಮಾಡಿದ ಪ್ರಖ್ಯಾತ ವಾಗ್ಮಿ ಬಹು.ಜಿ. ಎಮ್ ಮುಹಮ್ಮದ್ ಖಾಮಿಲ್ ಸಕಾಫಿ ಉಸ್ತಾದ್ ಅವರನ್ನು ಅಲ್ ಮದೀನಾ ಅಧ್ಯಕ್ಷರರು ಹಾಗೂ ನಾಯಕರು ಶಾಲು ಹೊದಿಸಿ ಗೌರವಿಸಿದರು. ಇಲ್ಯಾಸ್ ಮೊಂಟುಗೋಳಿ ಧನ್ಯವಾದಗೈದರು.

error: Content is protected !! Not allowed copy content from janadhvani.com