ಜುಬೈಲ್: ಉತ್ತರ ಕರ್ನಾಟಕ ಶೈಕ್ಷಣಿಕ ಚಳುವಳಿಯಲ್ಲಿ ಮಾದರಿ ಸೇವೆ ಸಲ್ಲಿಸುತ್ತಿರುವ ಮಸ್ದರ್ ಎಜು ಅಂಡ್ ಚಾರಿಟಿ ಇದರ ವತಿಯಿಂದ ‘ಪೈಗಾಮೆ ಪೈಗಂಬರ್’ﷺ ಕಾರ್ಯಕ್ರಮ ಜುಬೈಲ್ ಮಸ್ಕ್ ರೆಸಾರ್ಟ್ ನಲ್ಲಿ ನಡೆಯಿತು.
ಮೌಲಿದ್ ಮತ್ತು ದುಆದೊಂದಿಗೆ ಆರಂಭಗೊಂಡ ಸಭೆಯ ಅಧ್ಯಕ್ಷತೆಯನ್ನು ಮಸ್ದರ್ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಹೆಚ್ ಐ ಇಬ್ರಾಹಿಂ ಮದನಿ ಉಸ್ತಾದರು ವಹಿಸಿದ್ದರು.
ಡಿಕೆಎಸ್ಸಿ ನಾಯಕ ಜನಾಬ್ ಅಬ್ದುಲ್ ಹಮೀದ್ ಅರಾಮೆಕ್ಸ್ ಸಭೆಯನ್ನು ಉದ್ಘಾಟಿಸಿದರು. ಪ್ರಮುಖ ಎಂಜಿಟಿ ಅಂತರಾಷ್ಟ್ರೀಯ ಸಮಿತಿ ನಾಯಕ ಅಬ್ದುಲ್ ಸತ್ತಾರ್ ಜಯಪುರ ಹಾಗೂ ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷರಾದ ಅಝೀಝ್ ಸಅದಿ ಮಾತನಾಡಿ ಶುಭ ಹಾರೈಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ ಅಧ್ಯಕ್ಷ ಭಾಷಣ ಮಾಡಿದರು. ಹಾಗೂ ಮಸ್ದರ್ ಎಜು ಅಂಡ್ ಚಾರಿಟಿ ಇದರ ಕುರಿತು ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ, ಮಸ್ದರ್ ಸಾರಥಿ ಹಾಫಿಲ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ವಿವರಿಸಿ ಮುಖ್ಯ ಪ್ರಭಾಷಣ ಮಾಡಿದರು.
ನಂತರ ಮಸ್ದರ್ ಜುಬೈಲ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಅಲ್ ಹಾಜ್ ಶರೀಫ್ ಸಾಮ್ಕೋನ್ ಕಳಸ ನಿರ್ದೇಶಕರಾಗಿ ಅಬ್ದುಲ್ ಹಮೀದ್ ಅರಾಮೆಕ್ಸ್, ಮುಹಮ್ಮದ್ ಅಲಿ ಗಲ್ಫ್ ಬೇಕರಿ, ಅಲ್ ಹಾಜ್ ಮುಹಮ್ಮದ್ ಕಮ್ಮರಡಿ.
ನೂತನ ಸಮಿತಿ ಅಧ್ಯಕ್ಷರಾಗಿ ಜನಾಬ್ ಖಲೀಲ್ ಜೋಕಟ್ಟೆ ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಸಅದಿ, ಶರೀಫ್ ಮಾರ್ನಾಡ್, ಇಸ್ಮಾಯಿಲ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಲಂ ಕಡಬಗೆರೆ ಕಾರ್ಯದರ್ಶಿಗಳಾಗಿ ತಸ್ರೀಫ್ ಕಣ್ಣಂಗಾರ್, ಶಫೀಕ್ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಆಸಿಫ್ ಗೂಡಿನಬಳಿ ರವರನ್ನು ಆಯ್ಕೆ ಮಾಡಲಾಯಿತು.
ನೌಫಲ್ ಬಜಾಲ್, ಇಕ್ಬಾಲ್ ಬೈಲೂರು, ಅಬ್ದುಲ್ ಖಾದರ್ ತೀರ್ಥಹಳ್ಳಿ, ಆಸಿಫ್ ಕೃಷ್ಣಾಪುರ, ಇಕ್ಬಾಲ್ ಮಲ್ಲೂರು, ಮಹಮ್ಮದ್ ರಫಿ ಮಸ್ತಿ ಕಟ್ಟೆ ,ಅಬೂಬಕ್ಕರ್ ಮೂಡಿಗೆರೆ, ಹುದೈಫ್ ಕಳಸ, ಬಶೀರ್ ಕಟ್ಟಿಪ್ಪಳ, ಮುಝಮ್ಮಿಲ್ ಮೂಡಬಿದ್ರಿ , ಅಶ್ರಫ್ ನಾಳ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಇಕ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?