ಕರ್ನಾಟಕ ಕಲ್ಚರಲ್ ಫೌಂಡೇಶನ್ KCF “ಜಗತ್ತಿಗೆ ಕರುಣೆಯ ಪ್ರವಾದಿ (ﷺ)” ಎಂಬ ಪ್ರಮೇಯದಲ್ಲಿ ಸೌದಿ ಅರೇಬಿಯಾದಾದ್ಯಂತ ನಡೆಸುತ್ತಿರುವ ರಬೀಅ್-23 ಕಾರ್ಯ ಕ್ರಮವು ಕೆ.ಸಿ.ಎಫ್ ಅಲ್ ಖಸೀಂ ಝೋನಿನ ಉನೈಝ ಯುನಿಟ್ ನಲ್ಲಿ ಅಕ್ಟೋಬರ್ 5 ಗುರುವಾರದಂದು ಅಲ್ ಫಲಾಹ ಇಸ್ತಿರಾದಲ್ಲಿ ಬಹಳ ವಿಜ್ರಂಭಣೆಯಿಂದ ಆಯೋಜಿಸಲಾಯಿತು
ಪ್ರವಾದಿ ಪ್ರಕೀರ್ತನೆಗಳ ನಂತರ ನಡೆದ ಸಭಾ ಕಾರ್ಯಕ್ರಮವು ಯಾಕೂಬ್ ಸಖಾಫಿ ಉಸ್ತಾದರ ಪ್ರಾರ್ಥನೆಯೊಂದಿಗೆ ಉನೈಝ ಸಿಟಿ ಯುನಿಟ್ ಅಧ್ಯಕ್ಷರಾದ ಆದಂ ತೋಡಾರು ರವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ಅಬ್ದುಲ್ಲ ಕಿರಾಅತ್ ಪಠಿಸಿ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಉದ್ಘಾಟಿಸಿದರು
ಐಸಿಎಫ್ ನೇತಾರ ಅಶ್ರಫ್ ಅಶ್ರಫಿ ಆಶಂಸಾ ಮಾತುಗಳನ್ನಾಡಿದರು
ಮುಹಮ್ಮದ್ ನಝೀರ್ ದಾರಿಮಿ ಮದುಹುರ್ರಸೂಲ್ ಪ್ರಬಾಷಣ ನಡೆಸಿದರು
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆ ಕಾರ್ಯದರ್ಶಿ ಕಾದರ್ ಕಣ್ಣಂಗಾರ್, ಹಾಗೂ ಖಸೀಂ ಝೋನ್ ಕೋಶಾಧಿಕಾರಿ ಇರ್ಷಾದ್ ಸಚ್ಚೇರಿಪೇಟೆ , 1CF, RSC , KMCC ನೇತಾರರು ಭಾಗವಹಿಸಿದರು
KCF ಅಂತರ್ರಾಷ್ಟ್ರೀಯ ಸಮಿತಿ ನೀಡಿದ ಯುನಿಟ್ ರಿಜಿಸ್ಟ್ರೇಶನ್ ಸರ್ಟ್ ಫಿಕೆಟ್ ಯುನಿಟ್ ಗಳಿಗೆ ವಿತರಿಸಲಾಯಿತು
ವಿವಿಧ ಸ್ಪರ್ದೆಗಳಲ್ಲಿವಿಜೇತರಾದ ಸ್ವರ್ದಾರ್ಥಿಗಳಿಗೆ ಬಹುಮಾನ ವಿತರಿಸಿ ಖಯ್ಯುಂ ಉಸ್ತಾದ್ ಜಾಲ್ಸೂರು ರವರ ಸಮಾರೋಪ ದುವಾದೊಂದಿಗೆ ಕೊನೆಗೊಳಿಸಲಾಯಿತು
ಬಶೀರ್ ಕನ್ಯಾನ ನಿರೂಪಣೆಗೈದ ಕಾರ್ಯ ಕ್ರಮವನ್ನು ಸಿದ್ದೀಕ್ ಸಖಾಫಿ ಸ್ವಾಗತಿಸಿ ಇಕ್ಬಾಲ್ ಪಾನೇಲ ವಂದಿಸಿದರು