ಅಬ್ಬಾಸಿಯ :ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ ﷺ
ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಸರೆನ್ಸ್ -2023 ಕಾರ್ಯಕ್ರಮ ಅಬ್ಬಾಸಿಯಾದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 22/09/2023 ರಂದು ಬಹಳ ವಿಜೃಂಭಣೆಯಿಂದ ನಡೆಯಿತು.
KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಸಯ್ಯಿದ್ ಹಬೀಬ್ ಅಲ್ ಬುಖಾರಿ ತಂಙಳ್ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಮೀದ್ ಸಹದಿ ಝುಹ್ರಿ,ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. ಕಾರ್ಯಕ್ರಮ ದಲ್ಲಿ ಕೆಸಿಎಫ್ ಸಂಘಟನ ಅಧ್ಯಕ್ಷ ಉಮರ್ ಝುಹ್ರಿ ಅವರನ್ನು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ TVS ಗ್ರೂಫ್ ಮಾಲೀಕ ಡಾ|ಹೈದರ್ ಹಾಜಿ ಹಾಗೂ ಇಂಜಿನಿಯರ್ ಹಮೀದ್ ಕುಳಿಯಾರ್ ರವರನ್ನು ನಮ್ಮ ಸಂಘಟನೆಯ ಹಿತೈಷಿಗಳು ಸಹಾಯಕರು ಎಂಬುದನ್ನು ಗುರುತಿಸಿ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್, ಯಾಕೂಬ್ ಕಾರ್ಕಳ ಬಂದ ಅತಿಥಿ ಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ.ಸಂಘಟನೆ ಬಂದ ದಾರಿಯನ್ನು ಸ್ಮರಿಸಿದರು. ಖಲಂದರ್ ಶಾಫಿ ರವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು.
ಕಾರ್ಯಕ್ರಮ ಕ್ಕೆ ಆಶಂಸಗೈದ ಉಮರ್ ಝುಹ್ರಿ ಉಮರುಲ್ ಫಾರೂಕ್ ಸಖಾಫಿ. Tvs ಮಾಲೀಕ ಡಾಕ್ಟರ್ ಹೈದರ್ ಹಾಜಿ ಇಂಜಿನಿಯರ್ ಹಮೀದ್ ಕುಳಿಯಾರ್ ಸಾಲ್ಮಿಯ ಕ್ಲಿನಿಕ್ ಬ್ರಾಂಚ್ ಮ್ಯಾನೇಜರ್ ಅಬ್ದುಲ್ ರಝಾಕ್ ಮಾತನಾಡಿದರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಹುಸೈನ್ ಏರುಮಾಡ್ ಅಧ್ಯಕ್ಷ ಬಾಷಣ ಮಾಡಿದರು.
ಬಹು. ಮದನೀಯಮ್ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಬಾಷಣ ಹಾಗೂ ಭಕ್ತಿ ನಿರ್ಭರವಾದ ದುವಾ ನೆರವೇರಿಸಿದರು. ಮುಖ್ಯ ಭಾಷಣ ಮಾಡಿದ ಪ್ರಖ್ಯಾತ ವಾಗ್ಮಿ ಬಹು.ಮದನೀಯಮ್ ಉಸ್ತಾದ್ ಅವರನ್ನು
ಬಹು.ಅಸಯ್ಯದ್ ಹಬೀಬ್ ಕೋಯ ತಂಗಳ್ ಹಾಗೂ ಕೆಸಿಎಫ್ ನ ನಾಯಕರು ಸೇರಿ ಕಾಣಿಕೆ ಕೊಟ್ಟು ಗೌರವಿಸಲಾಯಿತು. ಕೆಸಿಎಫ್ ic ಅಂತರಾಷ್ಟ್ರೀಯ ಪ್ರತಿಭೋತ್ಸವ ದಲ್ಲಿ ಕಿರಾಹತ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷರಾದ ಜನಾಬ್ ಶಾಫಿ ಜೋಕಟ್ಟೆ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು.
ಕೆಸಿಎಫ್ ದಫ್ಫ್ ಟೀಮ್ ವತಿಯಿಂದ ನಡೆದ ದಫ್ಫ್ ಪ್ರದರ್ಶನ ಬಹಳ ಅತ್ಯುತ್ತಮವಾಗಿತ್ತು.
ಕೆಸಿಎಫ್ ಐ ಟೀಮ್ ನ ಕರ್ತವ್ಯ ನಿಷ್ಠತೆಯನ್ನು ಹೊಂದಿರುವ ನಿಯಂತ್ರಣ ಹಾಗೂ ಅತಿಥಿಗಳ ಸ್ವೀಕಾರ ಕಾರ್ಯಕ್ರಮಕ್ಕೆ ಮೆರುಗುನೀಡುವಂತಿತ್ತು. ಕಾರ್ಯಕ್ರಮಕ್ಕೆ ಅಲ್ ಮದೀನಾ, ಕೆ ಕೆ ಎಂ ಎ, ಕಿಸ್ವಾ ಕೊಡಗು, ಮರ್ಕಝುಲ್ ಹುದ ಕುವೈಟ್,ಮುಹಿಮ್ಮಾತ್, ಡಿಕೆಎಸ್ ಸಿ ಸಮಿತಿ ಬಾಯರ್ ಸಮಿತಿ ಶುಭ ಕೋರಿದರು ಅದೇ ರೀತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ನಾಯಕರು ಝೋನ್ ನಾಯಕರು ಸೆಕ್ಟರ್ ನಾಯಕರು ಮತ್ತು ಹಲವು ಸಂಘಟನೆಗಳ ನಾಯಕರು ಭಾಗವಹಿಸಿದರು.
ಕಾರ್ಯಕ್ರಮವನ್ನು ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ನಿರೂಪಿಸಿದರು.
ಕೊನೆಯಲ್ಲಿ ಆಡಳಿತ ವಿಭಾಗ ಅಧ್ಯಕ್ಷರಾದ ಅಬ್ಬಾಸ್ ಬಳಂಜ ಧನ್ಯವಾದ ಹೇಳಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವರದಿ :ಇಬ್ರಾಹಿಂ ವೇಣೂರು ಕುವೈಟ್ ಪ್ರಕಾಶನ ಮತ್ತು ಪ್ರಸಾರ ವಿಭಾಗ






















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್