ದುಬೈ : ವಿಶ್ವ ಪ್ರವಾದಿ ﷺ ರವರ ಜನ್ಮ ದಿನಾಚರಣೆಯನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದು, ಯುಎಇ ಪ್ರಧಾನಿ, ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಂ ಮುಸ್ಲಿಂ ಜಗತ್ತಿಗೆ ತಮ್ಮ ಮೀಲಾದ್ ಸಂದೇಶವನ್ನು ನೀಡಿದ್ದಾರೆ.
ಎಕ್ಸ್ ಪ್ಲಾಟ್‌ಫಾರ್ಮ್ ಮೂಲಕ ಸಂದೇಶ ರವಾನಿಸಿರುವ ಶೈಖ್ ರವರು. ಪ್ರವಾದಿ ಸ್ಮರಣೆಯ ಮೂಲಕ ನಾವು ಅವರ ಮೇಲಿನ ಪ್ರೀತಿಯನ್ನು ನವೀಕರಿಸುತ್ತೇವೆ ಎಂದಿದ್ದಾರೆ.
ಅವರ ಟ್ವೀಟ್ ನ ಪೂರ್ಣ ರೂಪ
“ಶ್ರೇಷ್ಠ ವ್ಯಕ್ತಿಯ ಜನ್ಮದಿನವು ಆಗಮನವಾಗಿದೆ. ಅವರ ಜನ್ಮದಿಂದಾಗಿ ಭೂಮಿಯ ಪೂರ್ವ ಮತ್ತು ಪಶ್ಚಿಮವು ಬೆಳಗಿತು. ಅವರು ತಂದ ಬೆಳಕು ನಮ್ಮ ಮತ್ತು ಇಡೀ ಮಾನವ ಕುಲದ ಹೃದಯಗಳನ್ನು ಬೆಳಗಿಸಿತು, ಅವರ ಜೀವನಚರಿತ್ರೆ ಮತ್ತು ವಿಧಾನವು ನಮಗೆ ಮತ್ತು ಅಂತ್ಯ ದಿನದವರೆಗಿನ ಇಡೀ ಸಮುದಾಯಕ್ಕೆ ದಾರಿದೀಪವಾಗಿದೆ.”
“ನಮ್ಮ ಪ್ರವಾದಿಯವರ ಜನ್ಮ ವಾರ್ಷಿಕೋತ್ಸವದಂದು, ನಾವು ಅವರ ಮೇಲಿನ ಪ್ರೀತಿಯನ್ನು ನವೀಕರಿಸುತ್ತೇವೆ … ನಾವು ಅವರಿಗೆ ನಮ್ಮ ವಿಧೇಯತೆಯನ್ನು ನವೀಕರಿಸುತ್ತೇವೆ … ಅವರು ಜಗತ್ತಿಗೆ ತಂದ ಕರುಣೆ ಮತ್ತು ಒಳ್ಳೆಯತನದ ಮೌಲ್ಯಗಳನ್ನು ನಾವು ನವೀಕರಿಸುತ್ತೇವೆ.”
” ಈ ಸುಗಂಧಭರಿತ ವಾರ್ಷಿಕೋತ್ಸವದಂದು ನಾವು ಇಸ್ಲಾಮಿಕ್ ರಾಷ್ಟ್ರವನ್ನು ಅಭಿನಂದಿಸುತ್ತೇವೆ … ಅಲ್ಲಾಹನ ಸೃಷ್ಟಿ … ಅವನ ಸಿಂಹಾಸನ … ಮತ್ತು ಅವನ ಪದಗಳ ಶಾಯಿಯ ಸಂಖ್ಯೆಯ ಪ್ರಕಾರ ಇಂದು ಮತ್ತು ಪ್ರತಿದಿನ ಪ್ರವಾದಿ ರ ಮೇಲೆ ಸ್ವಲಾತ್ ಹೇಳುವೆವು (ಪ್ರಾರ್ಥನೆ) … ಆಮೀನ್”