ದುಬೈ: ಪ್ರವಾಸಿಗರಿಗೆ ವೈವಿಧ್ಯಮಯ ದೃಶ್ಯಗಳನ್ನು ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ದುಬೈ ನಗರದಲ್ಲಿ ತೇಲುವ ಮಸೀದಿ ಹೊಸ ಆಕರ್ಷಣೆಯಾಗಿ ಬರುತ್ತಿದೆ.
ಮುಂದಿನ ವರ್ಷ ತೇಲುವ ಮಸೀದಿಯನ್ನು ಪ್ರವಾಸಿಗರಿಗಾಗೆ ತೆರೆಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಸೀದಿಯು ವಿಶ್ವದಲ್ಲೇ ಮೊದಲನೆಯದು ಎಂದು ಅಧಿಕಾರಿಗಳು ಹೇಳುತ್ತಾರೆ. ಎಮಿರೇಟ್‌ನ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಚಟುವಟಿಕೆಗಳ ಇಲಾಖೆಯು ದುಬೈ ವಾಟರ್ ಕಾಲುವೆಯ ಮೇಲೆ ಮಸೀದಿಯನ್ನು ನಿರ್ಮಿಸುತ್ತಿದೆ. ಮಸೀದಿಯ ವೆಚ್ಚ 55 ಮಿಲಿಯನ್ ದಿರ್ಹಮ್ ಎಂದು ನಿರೀಕ್ಷಿಸಲಾಗಿದೆ.
ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಯಾತ್ರಾ ಕೇಂದ್ರವಾಗಿದೆ ಈ ಮೆಗಾ ಯೋಜನೆ ಎಂದು ಪ್ರಾಧಿಕಾರ ತಿಳಿಸಿದೆ. ಮೂರು ಮಹಡಿಗಳಲ್ಲಿ ಮಸೀದಿ ನಿರ್ಮಾಣವಾಗಲಿದೆ.
ಪ್ರಾರ್ಥನಾ ಕೇಂದ್ರವು ನೀರಿನ ಅಡಿಯಲ್ಲಿರಲಿದೆ. 50 ರಿಂದ 75 ಜನರು ಒಂದೇ ಸಮಯದಲ್ಲಿ ಪ್ರಾರ್ಥನೆ ಮಾಡಬಹುದು. ಬರ್ ದುಬೈನಲ್ಲಿ 2,000 ಚದರ ಮೀಟರ್ ಮಸೀದಿಯ ನಿರ್ಮಾಣವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ.
ಎಲ್ಲಾ ಧರ್ಮದ ಜನರಿಗೆ ಮಸೀದಿಗೆ ಭೇಟಿ ನೀಡಲು ಅವಕಾಶವಿದೆ. ಆದರೆ ಸಾಧಾರಣ ಉಡುಗೆ ತೊಡುಗೆ ಮತ್ತು ಇಸ್ಲಾಮಿಕ್ ಪದ್ಧತಿಗಳಿಗೆ ಅನುಗುಣವಾಗಿ ವರ್ತಿಸುವಂತೆ ಸಲಹೆ ನೀಡಲಾಗುವುದು.ಸಾಂಸ್ಕೃತಿಕ ಸಂವಹನ ಸಲಹೆಗಾರ ಅಹ್ಮದ್ ಖಲ್ಫಾನ್ ಅಲ್ ಮನ್ಸೂರಿ ಮಾತನಾಡಿ, ಮಹಿಳೆಯರು ತಮ್ಮ ತಲೆ ಮತ್ತು ಭುಜಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಲು ಕೇಳಿಕೊಳ್ಳುವುದಾಗಿ ತಿಳಿಸಿದರು.





















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು