janadhvani

Kannada Online News Paper

ಜ್ಯೋತಿಪುರ ಮರ್ಜಾನ್ ಮದ್ರಸ ಉದ್ಘಾಟನೆ

ದಾವಣಗೆರೆ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ಸೀಬ್ ಝೋನ್ ಪ್ರಾಯೋಜಕತ್ವದಲ್ಲಿ ಜ್ಯೋತಿಪುರದಲ್ಲಿ ಮರ್ಜಾನ್ ಮದ್ರಸ ಉದ್ಘಾಟನೆ ಹಾಗೂ ಮಾಝಿನ್ ಹೆರಿಟೇಜ್ ದಾರುಲ್ ಉಲೂಮ್ ಇಹ್ಸಾನ್ ಮದ್ರಸ ಇದರ ಪ್ರಥಮ ವಾರ್ಷಿಕ ಕಾರ್ಯಕ್ರಮವು ತಾರೀಕು 13/07/2023 ರಂದು ನಡೆಯಿತು.

KCF ಒಮಾನ್ ಪ್ರಾಯೋಜಕತ್ವದಲ್ಲಿ ದಾವಣಗೆರೆ ಜಿಲ್ಲೆಯ ಜ್ಯೋತಿಪುರದಲ್ಲಿ ಇಹ್ಸಾನ್ ಕರ್ನಾಟಕದ ಮೂಲಕ ಮರ್ಜಾನ್ ಮದ್ರಸವನ್ನು ಸಮುದಾಯಕ್ಕೆ ಸಮರ್ಪಿಸಲಾಯಿತು. ಹಾಗೂ ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ KCF ಒಮಾನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮಾಝಿನ್ ಹೆರಿಟೇಜ್ ಇದರ ದಾರುಲ್ ಉಲೂಮ್ ಇಹ್ಸಾನ್ ಮದ್ರಸ ಇದರ ಪ್ರಥಮ ವಾರ್ಷಿಕ ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದರ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ಇಸ್ಮಾಯಿಲ್ ಸಅದಿ ಕೀನ್ಯ ಉಪಾಧ್ಯಕ್ಷರು ಇಹ್ಸಾನ್ ಕರ್ನಾಟಕ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ವ್ಯವಸ್ಥಾಪಕರು ಮರ್ಕಝುಲ್ ಹಿದಾಯ ಕೋಟ್ಟಮುಡಿ, ಶಾಹುಲ್ ಹಮೀದ್ ಕಾರ್ಯದರ್ಶಿ ಇಹ್ಸಾನ್ ಕರ್ನಾಟಕ, ಅನ್ವರ್ ಅಸಅದಿ ಎಕ್ಸಿಕುಟಿವ್ ಆಫೀಸರ್ ಇಹ್ಸಾನ್ ಕರ್ನಾಟಕ, ಜನಾಬ್ ಆರಿಫ್ ಕೋಡಿ, ಕೋಶಾಧಿಕಾರಿ KCF ಒಮಾನ್, ಜನಾಬ್ ಇಕ್ಬಾಲ್ ಎರ್ಮಾಳ್ ಅದ್ಯಕ್ಷರು ಇಹ್ಸಾನ್ ವಿಭಾಗ KCF ಒಮಾನ್, ಸಿದ್ದೀಕ್ ಮಾಂಬ್ಳಿ ಸುಳ್ಯ ಆಡಳಿತ ವಿಭಾಗ KCF ಒಮಾನ್, ಸಲೀಮ್ ಮಿಸ್ಬಾಹಿ ಅಧ್ಯಕ್ಷರು ಕೆಸಿಎಫ್ ಒಮಾನ್ ಬೌಷರ್ ಝೋನ್, ಲತೀಫ್ ಮಂಜೇಶ್ವರ ಪ್ರಧಾನ ಕಾರ್ಯದರ್ಶಿ ಮಸ್ಕತ್ ಝೋನ್, KCF ಒಮಾನ್ ಸದ್ಯಸರಾದ ಉಸ್ಮಾನ್ ಸಖಾಫಿ ಬೊಳ್ಮಾರ್ ಹಾಗೊ ರಿಝ್ವಾನ್ KC Road , ಅಬ್ದುರ್ರಹ್ಮಾನ್ ಮೊಗರ್ಪಣೆ ಉಪಾಧ್ಯಕ್ಷರು ದ.ಕ ಜಿಲ್ಲಾ ವಕ್ಫ್ ಮಂಡಳಿ.ರಸೂಲ್ ಸಾಬ್ ಜ್ಯೋತಿಪುರ. ಸೈಫುದ್ದಿನ್ ಮೌಲಾನ. ಮುಫ್ತಿ ಅರಾಫಾತ್ ರಝ.ಶಫಿವುಲ್ಲಾ ನಿಜಾಮುದ್ದಿನ್ ಅಬೂ ಉಸ್ತಾದ್. ಬರಕತ್ ಹನುಮಂತಪುರ ಸಹಿತವಿರುವ ಊರಿನಗಣ್ಯರು ಉಪಸ್ಥಿತರಿದ್ದರು.ಮುಹಮ್ಮದ್ ಇಸ್ಹಾಕ್ ಸಖಾಫಿ ಉಸ್ತಾದರು ಮಾಝಿನ್ ಹೆರಿಟೇಜ್ ಇವರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com