ವಿಟ್ಲ: ಕೊಡಂಗಾಯಿ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಇದರ ವತಿಯಿಂದ ಕೊಡಂಗಾಯಿ ಅಂಗನವಾಡಿ ಕೇಂದ್ರಕ್ಕೆ ಫ್ಯಾನ್ ವಿತರಿಸಲಾಯಿತು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಜನಸೇವಾ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ, ಎಳೆ ವಯಸ್ಸಿನ ಯುವಕರ ಒಂದು ಮಹಾನ್ ಸಂಘಟನೆಯಾಗಿದೆ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT.
ಕಳೆದ ಹಲವು ತಿಂಗಳುಗಳಿಂದ ಅಂಗನವಾಡಿಯ ಫ್ಯಾನ್ ಕೆಟ್ಟು ಹೋಗಿದ್ದು, ಬಿಸಿಲ ಬೇಗೆಯಿಂದ ಮಕ್ಕಳು ಮತ್ತು ಶಿಕ್ಷಕರು ಕಷ್ಟಪಡುತ್ತಿರುವುದನ್ನು ಗಮನಕ್ಕೆ ತಂದಾಗ, ತಕ್ಷಣ ಸ್ಪಂದಿಸಿದ ಸಂಘಟನೆಯು ಶಿಕ್ಷಣಕ್ಕೆ ಯಾವುದೇ ತೊಂದರೆ ಇರಬಾರದೆಂಬ ನಿಟ್ಟಿನಲ್ಲಿ ಉತ್ತಮ ರೀತಿಯ ಫ್ಯಾನ್ ನೀಡಿ ಸಹಕರಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶರಫುದ್ದೀನ್, ಶಾಲಾ ಸಹಾಯಕ ಶಿಕ್ಷಕಿ ಗುಲಾಬಿ, ಪ್ರಮುಖರಾದ ಅಬ್ದುಲ್ಲ ಕುಂಞಿ, ನಾಸೀರ್ ಕತರ್, ಮಹಮ್ಮದ್ ರಫೀಕ್ ಪಿ, ಅಲೀಮುಲ್ಲಾ ಬೆಂಗಳೂರು, ಮತ್ತು ಸಮಿತಿ ಸದಸ್ಯರಾದ ರಾಹಿದ್, ನೌಫಲ್, ಇರ್ಶಾದ್ ಉಪಸ್ಥಿತರಿದ್ದರು.
ಕೊಡುಗೆ ನೀಡಿದ ಸಂಘದ ಅಧ್ಯಕ್ಷರೂ, ಸರ್ವ ಸದಸ್ಯರ ಪರೋಪಕಾರಿ ಮನೋಭಾವವನ್ನು ಶಿಕ್ಷಕಿ ಉಮಾವತಿ ಮುಕ್ತ ಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದರು, ಶಮೀರ್ ದುಬೈ ಸ್ವಾಗತಿಸಿ, ಸಾದಿಕ್ ವಂದಿಸಿದರು.
✒️ ನಿಯಾಝ್ ಎಂ ಕೆ ಕೊಡಂಗಾಯಿ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್