ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ಸಂಘಟನಾ ವಿಭಾಗದ ವತಿಯಿಂದ EVOLVE – ಸಂಘಟನಾ ಕಾರ್ಯಾಗಾರವು ದಿನಾಂಕ 15-06-2023 ರಂದು ದೋಹಾದ ಹಸನಿಯ್ಯಾದಲ್ಲಿ ನಡೆಯಿತು.


ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ರವರು ಉದ್ಘಾಟಿಸಿದರು.
ಕಾರ್ಯಕ್ರಮವು ಮೂರು ಭಾಗವಾಗಿ ಜರಗಿದ್ದು, ಮೊದಲ ಭಾಗದಲ್ಲಿ ಐಸಿಎಫ್ ಖತ್ತರ್ ನಾಯಕರಾದ ಜಮಾಲ್ ಅಝ್’ಹರಿ ಯವರಿಂದ ಸಂಘಟನೆಯ ಮಹತ್ವ ಹಾಗೂ ಕಾರ್ಯಚಟುವಟಿಕೆಯ ರೀತಿಯ ಕುರಿತು ತರಬೇತಿ ಜರಗಿತು. ಎರಡನೇ ಭಾಗದಲ್ಲಿ ಬಹುಮಾನ್ಯರಾದ ಎಂ.ಪಿ ಅಬ್ದುಲ್ಲ ಫೈಝಿ ನೆಕ್ರಾಜೆಯವರಿಂದ ಪವಿತ್ರ ಹಜ್ಜ್ ಆರಂಭವಾದ ದಾರಿಯ ಕುರಿತು ತರಗತಿ ನಡೆದರೆ, ಮೂರನೇ ಭಾಗವಾಗಿ RSC ಖತ್ತರ್ ನಾಯಕರಾದ ಅಬ್ದುಲ್ ರಹ್ಮಾನ್ ಏರೋಲ್ ರವರಿಂದ ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಸಂಘಟಿಸುವ ಕುರಿತಾದ ಪ್ರಾಯೋಗಿಕ ತರಗತಿ ಮೂಡಿ ಬಂತು.
ವೇದಿಕೆಯಲ್ಲಿ ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಅಧ್ಯಕ್ಷರಾದ ಖಾಲಿದ್ ಹಿಮಮಿ, ರಾಷ್ಟ್ರೀಯ ಅಡ್ಮಿನ್ ವಿಭಾಗದ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ, ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷ ಮಿರ್ಶಾದ್ ಕನ್ಯಾನ ಉಪಸ್ಥಿತರಿದ್ದರು.
ಕೆಸಿಎಫ್ ದೋಹಾ ಝೋನ್ ಶಿಕ್ಷಣ ವಿಭಾಗ ಅಧ್ಯಕ್ಷರಾದ ಆಸಿಫ್ ಅಹ್ಸನಿ ಅನ್ವರಿ ಕೊಡಗು ರವರ ನೇತೃತ್ವದಲ್ಲಿ ಮಹ್ಲರತುಲ್ ಬದ್ರಿಯ ಮಜ್ಲಿಸ್ ಕೂಡ ನಡೆಯಿತು. ಕೆಸಿಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಿಶಾದ್ ಮಧುವನ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ