ಮಕ್ಕತುಲ್ ಮುಕರ್ರಮ: ಮಕ್ಕಾದ ಮಿನಾ, ಮುಝ್ದಲಿಫಾ ಮತ್ತು ಅರಫಾದಲ್ಲಿ ಹಜ್ಜಾಜ್ಗಳು ನಡೆಯುವ ದಾರಿಗಳನ್ನು ತಂಪಾಗಿಸುವ ಯೋಜನೆಯು ಈ ವರ್ಷ ಜಾರಿಗೆ ಬರಲಿದೆ.
ಹಜ್ ಕರ್ಮಗಳನ್ನು ನಿರ್ವಹಿಸುವ ಪ್ರದೇಶಗಳಲ್ಲಿ ನೆಲವನ್ನು ತಂಪಾಗಿಸುವುದು ಮತ್ತು ಗಾಳಿಯ ಉಷ್ಣತೆಯನ್ನು ಕಡಿತಗೊಳಿಸುವುದು ಇದರ ಗುರಿಯಾಗಿದೆ. ಈ ಯೋಜನೆಯನ್ನು ಈ ಬಾರಿ “ಕಲ್ಲೆಸತ” ಕರ್ಮ ನಡೆಯುವ ಮಿನಾದ ಜಮ್ರಾದಲ್ಲಿ ಪರೀಕ್ಷಿಸಲಾಗುತ್ತಿದೆ.
ಹಜ್ನ ಪವಿತ್ರ ಸ್ಥಳಗಳಾದ ಅರಫಾ, ಮಿನಾ ಮತ್ತು ಮುಝ್ದಲಿಫಾವನ್ನು ಸಂಪರ್ಕಿಸುವ ನಡೆದಾರಿಗಳನ್ನು ತಂಪಾಗಿಸಲಾಗುತ್ತದೆ. ಹಜ್ ಸಮಯದಲ್ಲಿ ಯಾತ್ರಿಕರು ಈ ಮಾರ್ಗದಲ್ಲಿ ಚಲಿಸುತ್ತಾರೆ. ಹಜ್ ದಿನದಂದು ಈ ಮೂರು ಸ್ಥಳಗಳನ್ನು ಸಂಪರ್ಕಿಸುವ ರೈಲು ಮತ್ತು ಬಸ್ ಸೇವೆಗಳು ಲಭ್ಯವಿದೆ. ಆದಾಗ್ಯೂ, ಅನೇಕ ಯಾತ್ರಿಕರು ಅರಫಾತ್ ನಂತರ ಮತ್ತು ಮಿನಾದಲ್ಲಿ ತಂಗುವ ಸಮಯದಲ್ಲಿ ಈ ಮಾರ್ಗಗಳನ್ನು ಬಳಸುತ್ತಾರೆ.
ತಂಪಾಗಿಸುವ ಮೊದಲ ಪರೀಕ್ಷೆಯನ್ನು ಮಿನಾದಿಂದ ಜಮ್ರಾ ಅಥವಾ ಕಲ್ಲೆಸೆಯುವ ಸ್ಥಳದಲ್ಲಿ ನಡೆಸಲಾಗುತ್ತದೆ. ಇಲ್ಲಿ ಟಾರ್ ಮಾಡಿದ ಪ್ರದೇಶದಲ್ಲಿನ ನೆಲವನ್ನು ವಿಶೇಷ ಮಿಶ್ರಣದಿಂದ ಶಾಖ ನಿರೋಧಕವಾಗಿ ಮಾಡಲಾಗುತ್ತದೆ. ಇದರಿಂದ ಯಾತ್ರಾರ್ಥಿಗಳಿಗೆ ಹೆಚ್ಚು ಬಿಸಿ ತಟ್ಟುವುದಿಲ್ಲ. ವಾತಾವರಣವನ್ನು ತಂಪಾಗಿಸಲು ವಾಟರ್ ಸ್ಪ್ರೇ ಕೆಲಸ ಮಾಡುವುದರಿಂದ, ಶಾಖ ನಿಯಂತ್ರಣಕ್ಕೆ ಬರಲಿದೆ.
ಈ ಬಾರಿ ಹಜ್ ದಿನಗಳಲ್ಲಿ, ತಾಪಮಾನವು 45 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ. ಆದರೆ,ಬಿಸಿ ತಗಲುವ ನಡೆದಾರಿಗಳ ತಾಪಮಾನವು 70 ಡಿಗ್ರಿ ಸೆಲ್ಸಿಯಸ್ಗೆ ತಲುಪಬಹುದೆಂದು ಹಜ್ ಉಮ್ರಾ ಸಚಿವಾಲಯವು ಸೂಚಿಸುತ್ತದೆ. ಇದಕ್ಕೆ ಪರಿಹಾರವೆಂಬಂತೆ ಹೊಸ ಯೋಜನೆಯನ್ನು ನಡೆಸಲಾಗುತ್ತಿದೆ.
















ಇನ್ನಷ್ಟು ಸುದ್ದಿಗಳು
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ