janadhvani

Kannada Online News Paper

ಅಲ್ ಹರಮೈನ್ ಸೂರಿಂಜೆ ಇದರ ಜುಬೈಲ್’ 2023-2024 ನೇ ಸಾಲಿನ ನೂತನ ಸಮೀತಿ ಆಯ್ಕೆ

ಅಲ್ ಹರಮೈನ್ ಸೂರಿಂಜೆ ಇದರ ಜುಬೈಲ್’ನ ಸಮಿತಿಯ ವಾರ್ಷಿಕ ಸಭೆಯು 19 ಮೇ 2023 ರಂದು ಸಂಸ್ಥೆಯ ಗೌರವಾಧ್ಯಕ್ಷರಾದ ಜನಾಬ್ ಹಮೀದ್ ಬೊಳ್ಳಾರ್ ರವರ ಅಧ್ಯಕ್ಷತೆಯೊಂದಿಗೆ ಜುಬೈಲ್’ನ cookxon ಹೋಟೆಲ್’ನಲ್ಲಿ ನಡೆಸಲಾಯಿತು.

ಎಸ್‌ಎ ಜಲೀಲ್ ಅವರ ದುಆದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ದಾವೂದ್ ಪಂಜಾ ಅವರು ಕಿರಾತ್ ಪಠಿಸಿದರು.ಸ್ವಾಗತ ಭಾಷಣವನ್ನು ಇಝುದ್ದೀನ್ ಎಸ್.ಎ ಮಾಡಿದರು.

ಸಭೆಯಲ್ಲಿ ಗೌರವಾನ್ವಿತ ಅತಿಥಿ ಜನಾಬ್ ಜಲೀಲ್ ಎಸ್ಎ (ಅಧ್ಯಕ್ಷರು ಜಮಾತ್ ಕಮಿಟಿ ಸೂರಿಂಜೆ) ಮತ್ತು ಜನಾಬ್ ಅಯ್ಯೂಬ್ ಸೂರಿಂಜೆ (ಸದಸ್ಯರು, ಜಮಾತ್ ಕಮಿಟಿ ಸೂರಿಂಜೆ) ಅವರನ್ನು ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ಲಾ ನಿಶಾನ್ ಮಿಲನ್ ಅವರು ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಬಿಎ ರವರು ವರದಿ ವಾಚಿಸಿದರು ಮತ್ತು ಹಣಕಾಸಿನ ವರದಿಯನ್ನು ಉಬೈದುಲ್ಲಾ ಎಸ್ಎ ಸೂರಿಂಜೆ ಮಂಡಿಸಿದರು.

2023-2024 ನೇ ಸಾಲಿನ ಸಮಿತಿಯನ್ನು ಹಮೀದ್ ಬೊಲ್ಲಾರ್ ಮತ್ತು ಸುಲೈಮಾನ್ ಮಿಲನ್ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.(ಚಿತ್ರದಲ್ಲಿ ನೂತನ ಸಮೀತಿಯ ಸದಸ್ಯರ ವಿವರವಿದೆ)

ನಿಯಾಝ್ ಮಿಲನ್ ಧನ್ಯವಾದವಗೈದರು.

error: Content is protected !! Not allowed copy content from janadhvani.com