ದಮ್ಮಾಮ್ |ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು,ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಹಫರ್ ಅಲ್ ಬಾತಿನ್ ಘಟಕದ 28ನೇ ವಾರ್ಷಿಕ ಮಹಾಸಭೆ 2, ಮಾರ್ಚ್ 2023 ಗುರುವಾರ ರಾತ್ರಿ ಡಿಕೆಯಸ್ಸಿ ಹಾಲ್ ನಲ್ಲಿ ಅಧ್ಯಕ್ಷ ಸಿರಾಜ್ ಕುಂತೂರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.
ಸ್ವಾದಿಖ್ ಸಾಗರ ಖಿರಾಅತ್ ಪಠಿಸಿದರು. ಸಿದ್ದೀಖ್ ಕನ್ಯಾನ ಸ್ವಾಗತಿಸಿದರು.ಹಫರುಲ್ ಬಾತಿನ್ ಘಟಕದ ಗೌರವಾಧ್ಯಕ್ಷ ಉಸ್ತಾದ್ ನಜೀಂ ಮದನಿ ಯವರು ಡಿಕೆಯಸ್ಸಿ ಯ ಕಾರ್ಯಕಲಾಪ ಗಳನ್ನು ವಿವರಿಸುತ್ತಾ ತಖ್ವಾ ದೊಂದಿಗೆ ಡಿಕೆಯಸ್ಸಿಗಾಗಿ ಪ್ರವರ್ತನೆಗೈದು ಅಭಿವೃದ್ಧಿ ಗೊಳಿಸಿರಿ ಎಂದು ನಸೀಹತ್ ನೀಡಿ ಸಮಾರಂಭವನ್ನು ಉದ್ಘಾಟಿಸಿದರು.
ರಿಯಾಝ್ ಉಳ್ಳಾಲ ವಾರ್ಷಿಕ ವರದಿ ವಾಚಿಸಿದರು ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿದರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಿರಾಜ್ ಕುಂತೂರು ಡಿಕೆಯಸ್ಸಿಯ ಅಭಿವ್ರಧ್ಧಿಗಾಗಿ ಇನ್ನು ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಅಗತ್ಯವಿದೆ. ತಾವುಗಳೆಲ್ಲರೂ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ಹಿತವಚನ ನೀಡಿದರು.
ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ರವರ ನೇತೃತ್ವದಲ್ಲಿ 2023-24 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷ ರಾಗಿ ಇರ್ಶಾದ್ ಕೆಸಿ ರೋಡ್ ಉಚ್ಚಿಲ, ಗೌರವಾಧ್ಯಕ್ಷ ರಾಗಿ ನಜೀಂ ಮದನಿ ಪೂಂಜಾಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಮ್ಮುಂಜೆ ಹಾಗೂ ಕೋಶಾಧಿಕಾರಿ ಯಾಗಿ ಎರ್ಮಾಳ್ ಆಯ್ಕೆಗೊಂಡರು.
ಉಪಾಧ್ಯಕ್ಷ ರಾಗಿ ಅಬ್ದುರ್ರಶೀದ್ ಕುಂಜಾಲ್, ಮುಹಮ್ಮದ್ ಮದನಿ ಮುರ್ಡೇಶ್ವರ, ಜೊತೆ ಕಾರ್ಯದರ್ಶಿ ಯಾಗಿ ರಿಯಾಝ್ ಉಳ್ಳಾಲ, ಸಿರಾಜ್ ಕುಂತೂರು ರವರನ್ನು ನೇಮಕ ಗೊಳಿಸಲಾಯಿತು.
ಸಲಹಾ ಸಮಿತಿಗೆ ಹಸನ್ ಆರಗ,ಅಹ್ಮದ್ ಶಾಹ್ ಮದ್ದಡ್ಕ , ಹೈದರ್ ಮರ್ದಾಳ, ಓರ್ಗನೈಸರಾಗಿ ಅಕ್ಬರ್ ಎಡೂರು, ರಫೀಖ್ ಕುಂತೂರು, ಸುಲೈಮಾನ್ ಸುಳ್ಯ , ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಎಡೂರು ಹಾಗೂ ಆಡಿಟರ್ ಆಗಿ ಸ್ವಾದಿಖ್ ಸಾಗರ ರನ್ನು ನೇಮಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ಹಾಗೂ ಹಫರ್ ಅಲ್ ಬಾತಿನ್ ಉಸ್ತುವಾರಿ ಅಬ್ದುಲ್ ಕರೀಂ ಪಾಣೆಮಂಗಳೂರು ಸಂದರ್ಭೋಚಿತವಾಗಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಇರ್ಶಾದ್ ಉಚ್ಚಿಲ ರವರು ಮಾತನಾಡಿ ಡಿಕೆಯಸ್ಸಿ ಅಭಿವ್ರಧ್ಧಿಗೆ ನಮ್ಮೊಂದಿಗೆ ಕೈಜೋಡಿಸಿರಿ ಎಂದು ವಿನಂತಿಸಿದರು.
ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆ ಧನ್ಯವಾದ ಗೈದರು.
ವರದಿ: ಇಸ್ಮಾಯೀಲ್ ಕಾಟಿಪಳ್ಳ
ದಮ್ಮಾಂ.