ರಿಯಾದ್: ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ರಂಜಾನ್ ತಿಂಗಳಲ್ಲಿ ಉಮ್ರಾ ಮಾಡಲು ಬಯಸುವವರಿಗೆ ಪರವಾನಗಿ ನೀಡಲು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಉಮ್ರಾಗಾಗಿ ನುಸುಕ್ ಮತ್ತು ತವಕ್ಕಲ್ನಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಬುಕಿಂಗ್ ಮಾಡಬೇಕು. ರಂಜಾನ್ ಮೊದಲ 20 ದಿನಗಳ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ರಂಜಾನ್ ಕೊನೆಯ 10 ಕ್ಕೆ ಉಮ್ರಾ ಬುಕಿಂಗ್ ಸೌಲಭ್ಯವನ್ನು ಮತ್ತೆ ಪ್ರಾರಂಭಿಸಲಾಗುವುದು.
ರಂಜಾನ್‌ನ ಮೊದಲ 20 ದಿನಗಳ ‘ಟೈಮ್ ಮ್ಯಾಪ್’ ಅನ್ನು ಸಚಿವಾಲಯ ಪರಿಶೀಲಿಸಿದೆ. ವಿವಿಧ ದಿನಗಳಲ್ಲಿ ವಿವಿಧ ಸಮಯಗಳಲ್ಲಿ ಯಾತ್ರಿಗಳ ಸಂಚಾರವನ್ನು ಬುಕಿಂಗ್ ಸಮಯದಲ್ಲಿ ಅಪ್ಲಿಕೇಶನ್‌ನಲ್ಲಿ ಮೂರು ಬಣ್ಣಗಳಲ್ಲಿ ತೋರಿಸಲಾಗುತ್ತದೆ. ಅತ್ಯಂತ ಕಡಿಮೆ ಜನದಟ್ಟಣೆ ಸಮಯವನ್ನು ಗಾಢ ಹಸಿರು(Dark Green) ಬಣ್ಣದಲ್ಲಿ, ಮಧ್ಯಮ ಜನದಟ್ಟಣೆಯನ್ನು ಕಿತ್ತಳೆ(Orange) ಬಣ್ಣದಲ್ಲಿ ಮತ್ತು ಹೆಚ್ಚಿನ ಜನದಟ್ಟಣೆ ಸಮಯವನ್ನು ಗಾಢ ಕೆಂಪು(Red) ಬಣ್ಣದಲ್ಲಿ ತೋರಿಸಲಾಗಿದೆ.
ಉಮ್ರಾ ಮಾಡಲು ಉದ್ದೇಶಿಸಿರುವವರು ಪರವಾನಗಿ ಪಡೆದಿರಬೇಕು. ಅನುಮತಿಯಿಲ್ಲದೆ ಉಮ್ರಾ ಮಾಡಲು ಪ್ರಯತ್ನಿಸಿದರೆ 10,000 ರಿಯಾಲ್‌ಗಳವರೆಗೆ ದಂಡ ವಿಧಿಸಲಾಗುವುದು ಎಂದು ಸೌದಿ ಆಂತರಿಕ ಸಚಿವಾಲಯ ಈ ಹಿಂದೆ ಎಚ್ಚರಿಕೆ ನೀಡಿತ್ತು. ಉಮ್ರಾ ವೀಸಾ ಹಾಗೂ ಇತರೆ ವೀಸಾಗಳಲ್ಲಿ ಸೌದಿ ಅರೇಬಿಯಾಕ್ಕೆ ಬರುವವರಿಗೆ ಉಮ್ರಾ ಮಾಡಲು ಅವಕಾಶ ಕಲ್ಪಿಸುವ ಮೂಲಕ ಈ ವರ್ಷದ ರಂಜಾನ್‌ನಲ್ಲಿ ಉಮ್ರಾ ಯಾತ್ರಾರ್ಥಿಗಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ.