ಹೌದು,
ವಿಶಾಲವಾದ ಜಗತ್ತಿನಲ್ಲಿ ಪರದೆಯ ಮುಂದೆ ಜಗತ್ತಿನ ಆಗುಹೋಗುಗಳು ಪ್ರದರ್ಶನಗೊಳ್ಳುತ್ತಿರುವಾಗ,ಜಗತ್ತು ಜಿಗಿಜಿಗಿದು ವಿಜ್ಞಾನದ ನವ ನವೀನ ಶಿಖರದತ್ತ ದಾಪುಗಾಲಿಡುವಾಗ ಮನುಷ್ಯ ಮನಸ್ಸುಗಳು ಅನೈಕ್ಯ, ಅನೀತಿ,ಅಧರ್ಮಗಳ ಮೊರೆ ಹೋಗುತ್ತಿರುವ ವಿಷಾದಕರವಾದ ಸನ್ನಿವೇಶದಲ್ಲಿ ಮನುಷ್ಯ ಮನಸ್ಸುಗಳಲ್ಲಿ ಧಾರ್ಮಿಕತೆಯ ಪ್ರಜ್ಞೆಯನ್ನು ಬೆಳೆಸಿ ಒಂದು ಕಡೆಯಿಂದ ಭವ್ಯ ಭಾರತದ ಸಂವಿಧಾನವನ್ನು ಗೌರವಿಸಿ, ಮತ್ತೊಂದು ಕಡೆಯಿಂದ ಪವಿತ್ರ ಧರ್ಮದ ಸುಂದರ ಆಶಯಗಳನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ “ಎಸ್ಸೆಸ್ಸಫ್ “ಗಿಂದು ಜನುಮದಿನದ ಹರುಷ…!!
ಕಾಂತಪುರದಿಂದ ಕ್ಯಾಲಿಫೋರ್ನಿಯಾದವರೆಗೆ,ಫಹದ್ ರಾಜರ ಅರಮನೆಯಿಂದ ಪಾಶ್ಚಾತ್ಯ ವೈಟ್ ಹೌಸ್ ನ ಕಮಾನ ಕೇಂದ್ರ ಕ್ಷೇತ್ರಗಳಿಗೆ ಮಾನವೀಯತೆಯ ಸಂದೇಶದ ಕಂಪನವನ್ನು ಪಸರಿಸಿದ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರ ನೇತೃತ್ವದಲ್ಲಿ ಅಷ್ಟ ದಿಕ್ಕು ನಡುಗಿಸಿದ ಸುನ್ನೀ ವಿದ್ಯಾರ್ಥಿ ಸೇನೆ, ಟೀಕೆ ರಹಿತ ಜಗತ್ತಿನಲ್ಲಿ ಕ್ರಾಂತಿಯ ವಿಸ್ಮಯದ ಕೇಂದ್ರ ಬಿಂದು, ಸಾಮ್ರಾಜ್ಯಶಾಹಿಗಳ ಮೊನಕಾಲೂರಿದ, ಫ್ಯಾಶಿಸ್ಟ್ ಶಕ್ತಿಗಳ ಮೊಳಕೆ ತಿರುವಿದ, ಒಂದು ಹಿಡಿ ಕೆಡುಕುಗಳಿಗೆ ಕಬ್ಬಿಣದ ಲೋಹ ಬಿಡಿದ, ಹಲವಾರು ಧಾರ್ಮಿಕ,ಸಾಮಾಜಿಕ ಹೋರಾಟಗಳಿಂದ ಇತಿಹಾಸ ಬರೆದ ಸುನ್ನೀ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸಫ್..!!
ಕಳೆದ ನಾಲ್ಕು ದಶಕಗಳ ಕಾರ್ಯಚಟುವಟಿಕೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಲವಾರು ಸಾಮುದಾಯಿಕ ಹಾಗೂ ಸಾಮಾಜಿಕ ಸೇವೆಗಳ ಮುಖಾಂತರ “ಕೆಡುಕುಗಳಿಂದ ಒಳಿತಿನೆಡೆಗೆ “ಅನ್ನುವ ಉದಾತ್ತವಾದ ಘೋಷವಾಕ್ಯದೊಂದಿಗೆ ಮುನ್ನಡೆಯುತ್ತಿರುವ “ಸುನ್ನೀ ಸ್ಟೂಡೆಂಟ್ ಫೆಡರೇಶನ್ ” ಇನ್ನು ಮುಂದೆಯೂ ಆರೋಪ,ಅಪಹಾಸ್ಯಗಳಿಗೆ ಕುಂದದೆ ಯಾವುದೇ ಅಡೆತಡೆಗಳಿಲ್ಲದೆ ಸಾಮುದಾಯಿಕ ಸೇವೆಗಳ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಾ ಅನೈಕ್ಯ,ಅಧರ್ಮಗಳನ್ನು ಎದುರಿಸಿ ಮುನ್ನಡೆಯಲಿಯೆಂದು ಹಾರೈಸೋಣ.
ಸ್ನೇಹಜೀವಿ ಅಡ್ಕ