ಅಬುಧಾಬಿ: ಯುಎಇಯಲ್ಲಿ ಇಂಟರ್ನೆಟ್ ಕರೆ ಮಾಡಲು 17 ಧ್ವನಿ ಅಪ್ಲಿಕೇಶನ್‌ಗಳನ್ನು (Voice over Internet Protocol (VoIP) ಅನುಮೋದಿಸಲಾಗಿದೆ ಎಂದು ದೂರಸಂಪರ್ಕ ಮತ್ತು ಡಿಜಿಟಲ್ ಸರ್ಕಾರದ ನಿಯಂತ್ರಣ ಪ್ರಾಧಿಕಾರ (UAE’s Telecommunications and Digital Government Regulatory Authority (TDRA) ಪ್ರಕಟಿಸಿದೆ.
ವಾಯ್ಸ್ ಓವರ್ ಇಂಟರ್‌ನೆಟ್ ಪ್ರೋಟೋಕಾಲ್‌ನ (VoIP) ಅನಧಿಕೃತ ಬಳಕೆ ಶಿಕ್ಷಾರ್ಹ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ವಲಸಿಗರು ಮನೆಗೆ ಕರೆ ಮಾಡಲು ಉಚಿತ ಇಂಟರ್ನೆಟ್ ಕರೆ ಮಾಡುವ ಅಪ್ಲಿಕೇಶನ್‌ಗಳನ್ನು ಅವಲಂಬಿಸಿದ್ದಾರೆ. ಯುಎಇ ವಿಶ್ವದ ಅತ್ಯಂತ ವೇಗದ ಮತ್ತು ಉತ್ತಮ ಗುಣಮಟ್ಟದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ಇಂಟರ್ನೆಟ್ ಕರೆಯನ್ನು ನಿಯಂತ್ರಿಸುವ ಕಾನೂನನ್ನು ಅನುಸರಿಸಲು ಬದ್ಧರಾಗಿರುತ್ತಾರೆ ಎಂದು ಪ್ರಾಧಿಕಾರವು(TDRA) ಸೂಚಿಸಿದೆ.
ಏತನ್ಮಧ್ಯೆ, ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳನ್ನು (VPN) ಬಳಸಿಕೊಂಡು ಇಂಟರ್ನೆಟ್ ಕರೆ ಮಾಡುವುದನ್ನು ಯುಎಇಯಲ್ಲಿ ನಿಷೇಧಿಸಲಾಗಿದೆ.
17 ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಅಪ್ಲಿಕೇಶನ್‌ಗಳು ಯುಎಇಯಲ್ಲಿ ಪರವಾನಗಿ ಪಡೆದಿವೆ.
1. Microsoft Teams
2. Skype for Business
3. Zoom
4. Blackboard
5. Google Hangouts Meet
6. Cisco Webex
7. Avaya Spaces
8. BlueJeans
9. Slack
10. BOTIM
11. C ME
12. HiU Messenger
13. Voico
14. Etisalat Cloud Talk Meeting
15. Matrx
16. Totok
17. Comera