ಸೌದಿ ಅರೇಬಿಯಾ: ಜಿದ್ದಾದಲ್ಲಿ ಮೃತಪಟ್ಟ ಬೆಂಗಳೂರಿನ ನಿವಾಸಿ ಸಲಾರ್ ಪಾಷಾ ಎಂಬವರ ಅಂತ್ಯಕ್ರಿಯೆಯು (ನವಂಬರ್ 1 ಮಂಗಳವಾರ) ನಿನ್ನೆ ಜಿದ್ದಾದ ಫೈಹಾದಲ್ಲಿರುವ ಮಖ್ಬರ ರಹ್ಮಾದಲ್ಲಿ ಕುಟುಂಬಸ್ತರು, ಸ್ನೇಹಿತರು ಹಾಗೂ ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಅನಾರೋಗ್ಯದಿಂದ ಮೃತಪಟ್ಟಿದ್ದರು.
ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಶರಫಿಯ್ಯ ಸೆಕ್ಟರ್ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರಾದ ನಾಸಿರ್ ಹೆಚ್ಕಲ್ ಹಾಗೂ ಫಾರೂಕ್ ಬಂಟ್ವಾಳ , ಮದೀನಾ ಝೋನ್ ನೇತಾರರಾದ ರಝಾಕ್ ಉಳ್ಳಾಲ,ಹಾಗೂ ದಾವೂದ್ ಬೆಂಗಳೂರು ರವರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು ,ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರ ಗತಿಯಲ್ಲಿ ನಡೆಸಲು ಸಹಕರಿಸಿದರು.
ಮಯ್ಯಿತ್ ದಫನ ಕಾರ್ಯದಲ್ಲಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಲ್, ಹಮೀದ್ ಹಾಜಿ ಸಾಗರ್ ,ಮುಹಮ್ಮದ್ ಕುಕ್ಕಾಜೆ,ಯೂಸೂಫ್ ಕುಕ್ಕಾಜೆ ಸೇರಿದಂತೆ ಕೆಸಿಎಫ್ ಕಾರ್ಯಕರ್ತರು ಹಾಗೂ ಹಿತೈಸಿಗಳು ಭಾಗವಹಿಸಿದ್ದರು.