janadhvani

Kannada Online News Paper

ಇಂದು ಚಿಕ್ಕಮಗಳೂರಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ

ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಮುನ್ನುಡಿಯಾಗಿ, ರಾಜ್ಯ ಮಟ್ಟದ ಸಾಹಿತ್ಯೋತ್ಸ ನಡೆಯುತ್ತಿದೆ

ಚಿಕ್ಕಮಗಳೂರು: ಬಹು ನಿರೀಕ್ಷೆಯ ರಾಜ್ಯ ಮಟ್ಟದ ಎಸ್ಸೆಸ್ಸೆಫ್ ಸಾಹಿತ್ಯೋತ್ಸವ -2022 ಕಾಫಿಯ ನಾಡು ಚಿಕ್ಕಮಗಳೂರಿನ ಮಾಗಡಿ ಬಳಿಯ ಇಂಪಾಲ್ ಆಡಿಟೋರಿಯಂನಲ್ಲಿ ಇಂದು(ಅಕ್ಟೋಬರ್ 15 ಶನಿವಾರ) ನಡೆಯಲಿದೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಮುನ್ನುಡಿಯಾಗಿ ನಡೆಯಲಿರುವ ಈ ರಾಜ್ಯ ಮಟ್ಟದ ಸಾಹಿತ್ಯೋತ್ಸವವನ್ನು ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಸಾಹಿತಿ ರವೀಶ್ ಕ್ಯಾತನಬೀಡು ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಬಹು ಅಬ್ದುಲ್ ಲತೀಫ್ ಸ’ಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಕೋಶಾಧಿಕಾರಿ ಸುಫ್ಯಾನ್ ಸಖಾಫಿ,ಕಾರ್ಯದರ್ಶಿಗಳಾದ ಹುಸೈನ್ ಸಅದಿ ಹೊಸ್ಮಾರ್,ಸಫ್ವಾನ್ ಚಿಕ್ಕಮಗಳೂರು,ಅಬ್ದುಲ್ ನಾಸಿರ್ ಇ೦ಫಾಲ್,ಯೂಸುಫ್ ಹಾಜೀ ಉಪ್ಪಳ್ಳಿ, SSF ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಝೈನುಲ್ ಆಬಿದ್ ಸಖಾಫಿ ಮಾಗುಂಡಿ,ಪ್ರಧಾನ ಕಾರ್ಯದರ್ಶಿ ಶರೀಫ್ , ರಾಜ್ಯ ನಾಯಕರಾದ ಎನ್.ಸಿ ರಹೀ೦,ರವೂಫ್ ಕು೦ದಾಪುರ,ಶರೀಫ್ ಕೊಡಗು ,ಅಝಿಝ್ ಸಖಾಫಿ,ಹಾಗೂ ಇನ್ನಿತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಕನ್ವೀನರ್ ಮಹಮ್ಮದಲಿ ತುರ್ಕಳಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com