janadhvani

Kannada Online News Paper

KCF ಅಬುಧಾಬಿ ನಾಳೆ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಪ್ರಯುಕ್ತ KCF ಅಬುಧಾಬಿ ನಾಯಕರಿಂದ ಪತ್ರಿಕಾಗೋಷ್ಠಿ

ಅಬುಧಾಬಿ ಕೆಸಿಎಫ್ ವತಿಯಿಂದ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ದತೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ, ಅಕ್ಟೋಬರ್ 16 ರಂದು ನಡೆಯುವ ಮೀಲಾದ್ ಸಮಾವೇಶಕ್ಕೆ ಯುಎಇಯ ವಿವಿದ ಭಾಗಗಳಿಂದ ಸುಮಾರು 1500 ರಷ್ಟು ವಿಶ್ವಾಸಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಮೌಲಿದ್ ಪಾರಯಣ, ಖವಾಲಿ, ಬುರ್ದ ಆಲಾಪಣೆ ಹಾಗು ಯುವ ವಾಗ್ಮಿ ಅನಸ್ ಅಮಾನಿ ಪುಷ್ಪಗಿರಿಯವರ ಪ್ರವಚಣ ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮವು ಸಂಜೆ ಆರು ಗಂಟೆಗೆ ಆರಂಬಗೊಳ್ಳಲಿದೆ. ಕಾರ್ಯಕ್ರಮದ
ಕೊನೆಯಲ್ಲಿ ತಬರ್ರುಕ್ ವಿತರಿಸಲಾಗುವುದು ಎಂದು ಸಂಘಟ‍ಕರು ತಿಳಿಸಿದ್ದು, ಮಹಿಳೆಯರಿಗೆ
ಪ್ರತ್ಯೇಕ ಆಸನ ವ್ಯವಸ್ತೆ ಕಲ್ಪಿಸಲಾಗಿದೆ.

ಅನಿವಾಸಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕರೆ ನೀಡಿದ್ದಾರೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮೀಲಾದ್ ಸಮಿತಿ ಅಧ್ಯಕ್ಷ ಇಂಜಿನಿಯರ್ ಮನ್ಸೂರ್ ಚಿಕ್ಕಮಗಳೂರು, ಕೆಸಿಎಫ್ ಅಬುಧಾಬಿ ಅದ್ಯಕ್ಷ ಹಸೈನಾರ್ ಅಮಾನಿ, ಕಾರ್ಯದರ್ಶಿ ಕಬೀರ್ ಬಾಯಂಬಾಡಿ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಹಕೀಂ ತುರ್ಕಲಿಕೆ ಹಾಜರಿದ್ದು ಮಾಹಿತಿ ನೀಡಿದರು.

error: Content is protected !! Not allowed copy content from janadhvani.com