janadhvani

Kannada Online News Paper

ಮರ್ಕಝ್ ನೋಲೇಜ್ ಸಿಟಿ ಉದ್ಘಾಟನೆ- ದ.ಕ ಜಿಲ್ಲಾ ವೆಸ್ಟ್ ಯೋಜನಾ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು :ವಿಶ್ವ ವಿಖ್ಯಾತ ಮರ್ಕಝ್ ನಾಲೇಜ್ ಸಿಟಿ ಅಕ್ಟೋಬರ್ ಕೊನೆಯ ವಾರದಲ್ಲಿ ಉದ್ಘಾಟನೆ ಗೊಳ್ಳಲಿದ್ದು ಈ ಪ್ರಯುಕ್ತ 12/9/2022 ಸೋಮವಾರ ದಂದು ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ಮರ್ಕಝ್ ಆಯೋಜನಾ ಸಮಿತಿ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆಯವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಿತು.

ಮರ್ಕಝ್ ಡೈರಕ್ಟರ್ ಜನರಲ್ ಹಾಗೂ ಕೇರಳ ಹಜ್ ಸಮಿತಿ ಅಧ್ಯಕ್ಷ ಸಿ ಮುಹಮ್ಮದ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮರ್ಝೂಖ್ ಸಅದಿ ಪಾಪಿನಶ್ಶೇರಿ ಮುಖ್ಯ ಪ್ರಭಾಷಣ ಮಾಡಿದರು. ಎಸ್ ವೈ ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಂ ಎಸ್. ಎಂ ಝೈನಿ ಕಾಮಿಲ್ ಮಾಹಿತಿ ನೀಡಿದರು.

ಜಂಇಯ್ಯತುಲ್ ಉಲಮಾ,ಎಸ್ ವೈ ಎಸ್,ಎಸ್ ಎಸ್ ಎಫ್,ಜಂಇಯ್ಯತುಲ್ ಮುಅಲ್ಲಿಮೀನ್,ಎಸ್ ಎಂ ಎ,ಕೆಸಿಎಫ್ ಸಂಘಟನೆ ಗಳ ಹಲವು ನಾಯಕರು ಭಾಗವಹಿಸಿದ್ದರು. ರಾಜ್ಯ ಯೋಜನಾ ಸಮಿತಿಯ ಜನರಲ್ ಕನ್ವೀನರ್ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಮರ್ಕಝ್ ನಾಲೇಜ್ ಸಿಟಿ ಯೋಜನಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಪದಾಧಿಕಾರಿಗಳು:
ಚೇರ್ಮೇನ್ ಹಾಫಿಳ್ ಯಾಕೂಬ್ ಸಅದಿ ನಾವೂರು, ವೈಸ್ ಚೇರ್ ಮೇನ್ ಗಳಾಗಿ ನವಾಝ್ ಸಖಾಫಿ ಅಡ್ಯಾರ್ ಪದವು ಮತ್ತು ಬದ್ರುದ್ದೀನ್ ಅಝ್ಹರಿ ಬಡಕಬೈಲು, ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು ಸಹಾಯಕ ಕನ್ವೀನರ್ ಗಳಾಗಿ ಇಸ್ಮಾಯಿಲ್ ಸಅದಿ ಉರುಮಣೆ, ಖಲೀಲ್ ಮಾಲಿಕಿ ಬೋಳಂತೂರು , ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ,ಖಾಲಿದ್ ಹಾಜಿ ಭಟ್ಕಳ,ಸಲೀಂ ಅಡ್ಯಾರ್ ಪದವು
ಕೋಶಾಧಿಕಾರಿಯಾಗಿ ಹನೀಫ್ ಹಾಜಿ ಉಳ್ಳಾಲ ಸೇರಿದಂತೆ ಒಟ್ಟು 33 ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com