janadhvani

Kannada Online News Paper

ಮೊಹಲ್ಲಾ ಸಮಿತಿಗಳು ಮಾದಕ ದ್ರವ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು- SMA

ವಿಟ್ಲ: ಎಲ್ಲಾ ಮೊಹಲ್ಲಾಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಬೇಕು ಎಂದು ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಗಾಯಿ ಹೇಳಿದರು.

ಈ ನಿಟ್ಟಿನಲ್ಲಿ ಎಸ್ ಎಂ ಎ ರಾಜ್ಯ ವ್ಯಾಪ್ತಿ ಮದರಸಗಳಲ್ಲಿ ನಡೆಸಿದ ಸ್ವಚ್ಛ ಕುಟುಂಬ ಸ್ವಸ್ಥ ಸಮಾಜ ವಿದ್ಯಾರ್ಥಿಗಳಲ್ಲಿ ಹೊಸ ಪರಿವರ್ತನೆಯನ್ನು ಮೂಡಿಸಿದೆ ಎಂದು ಅವರು ಹೇಳಿದರು. ಅವರು, ಪುತ್ತೂರು ಮುಸ್ಲಿಂ ಜಮಾಆತ್ ಕಚೇರಿಯಲ್ಲಿ ಸೆಪ್ಟೆಂಬರ್ 11 ರಂದು ನಡೆದ ವಿಟ್ಲ ಝೋನಲ್ ಎಸ್ ಎಂ ಎ ವಾರ್ಷಿಕ ಕೌನ್ಸಿಲ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಝೋನಲ್ ಎಸ್ ಎಂ ಎ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ನಿರ್ವಹಿಸಿದರು. ವೀಕ್ಷಕರಾಗಿ ಬಹು ಸಯ್ಯಿದ್ ಸಾದಾತ್ ತಂಙಳ್ ಎಸ್ ಎಮ್ ಎ ಜಿಲ್ಲಾಧ್ಯಕ್ಷರು ಭಾಗವಹಿಸಿ ಸಭೆ ನಿಯಂತ್ರಿಸಿ ದುಆ ನಡೆಸಿದರು. ಎಸ್ .ಎಂ.ಎ. ವಿಟ್ಲ ಝೋನಲ್ ಪ್ರಧಾನ ಕಾರ್ಯದರ್ಶಿ: ಕಾಸಿಂ ಸಖಾಫಿ ಸ್ವಾಗತಿಸಿದರು.ಪ್ರಸ್ತುತ ಸಮಿತಿಯನ್ನೇ ಮುಂದಿನ ವರ್ಷ ಅವಧಿಗೆ ಮುಂದುವರಿಸಲಾಯಿತು.

ಬಗ್ದಾದ್ ಝಿಯಾರತ್ ಯಾತ್ರೆ ಹೊರಡಲಿರುವ, ಎಸ್.ಎಂ.ಎ ಮಾಣಿ ರಿಜಿನಲ್ ಅಧ್ಯಕ್ಷರಾದ ಮೊಹಮ್ಮದ್ ರವರಿಗೆ ಬೀಳ್ಕೊಡುಗೆ ನೀಡಲಾಯಿತು.ಸಮಾರಂಭದಲ್ಲಿ ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ ಝೋನಲ್, ಕೋಶಾಧಿಕಾರಿ ಉಮ್ಮರ್ ವಿಟ್ಲ, ಎಸ್.ಎಂ.ಎ ರಿಜಿನಲ್ ಅಧ್ಯಕ್ಷರುಗಳಾದ ಹಕೀಮ್ ವಿಟ್ಲ, ಇಸ್ಮಾಯಿಲ್ ಕನ್ಯಾನ, ಹಸನ್ ಪುತ್ತೂರು, ಮುಹಮ್ಮದ್ ಮಾಣಿ ಹಾಗೂ ಜಿಲ್ಲಾ ಝೋನಲ್ ರಿಜನರಲ್ ನಾಯಕರು ಉಪಸ್ಥಿತರಿದ್ದರು.
ಕೊನೆಯಲ್ಲಿ ಎಸ್ ಎಂ ಎ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com