ಮಂಗಳೂರು: ಬಿ.ಜೆ.ಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತನ್ನ ನಿಕೇತನ ಪ್ರೇರಿತ ಹೇಳಿಕೆಯಲ್ಲಿ ಮದರಸ ಭಯೋತ್ಪಾದನೆಯ ಮೂಲ ಎಂದು ಹೇಳಿಕೆ ನೀಡಿದ್ದಾರೆ. ಹರಿಕೃಷ್ಣ ಬಂಟ್ವಾಳ್ ರವರು ತನ್ನ ಈ ಹಿಂದಿನ ರಾಜಕೀಯ ಜೀವನದಲ್ಲಿ ಅವರ ರಾಜಕೀಯ ಚಟುವಟಿಕೆಗಳಲ್ಲಿ ತಾನು ಭೇಟಿ ನೀಡಿದ ಮದರಸ ಸಂಸ್ಥೆಗಳ ಸಂಖ್ಯೆಯನ್ನು ಹೇಳಲಿ ಎಂದು ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ರವರು ಸವಾಲು ಹಾಕಿದ್ದಾರೆ.
ದ.ಕ.ಜಿಲ್ಲೆಯ ಬಂಟ್ವಾಳ ಕ್ಷೇತ್ರದ ಪ್ರಮುಖ ರಾಜಕೀಯ ನಾಯಕರು, ಪ್ರತಿನಿಧಿ ಮತ್ತು ಮಾಜಿ ಸಚಿವರ ಆಪ್ತರಾಗಿದ್ದ ಹರಿಕೃಷ್ಣ ಬಂಟ್ವಾಳ್ ರವರು ಅಂದು ತನ್ನ ರಾಜಕೀಯ ಚಟುವಟಿಕೆಗಳ ಭಾಗವಾದ ಕ್ಷೇತ್ರವಾರು ಭೇಟಿಗಳ ಕಾರ್ಯಕ್ರಮ ಇತ್ಯಾದಿಗಳಲ್ಲಿ ಮದರಸ, ಮಸೀದಿ, ಧಾರ್ಮಿಕ ಸಂಘಟನೆ, ಅನಾಥಾಶ್ರಮ, ಅಲ್ಪಸಂಖ್ಯಾತ ಶಾಲೆ ಕಾಲೇಜುಗಳನ್ನು ಭೇಟಿ ಮಾಡಿ ಅಲ್ಲಿನ ಧ್ಯೇಯೋದ್ದೇಶ ಗಳನ್ನು ಶ್ಲಾಘಿಸಿದ ಸಂದರ್ಭಗಳ ನ್ನು ಮರೆತಿರುವಂತಿದೆ ಎಂದು ಅಶ್ರಫ್ ಹೇಳಿದರು.
ಹರಿಕೃಷ್ಣ ಬಂಟ್ವಾಳ್ ರವರು ತನ್ನ ಹಿಂದಿನ ರಾಜಕೀಯ ಚಟುವಟಿಕೆಗಳ ಭಾಗವಾಗಿ ಭೇಟಿ ನೀಡಿದ ಅಷ್ಟೂ ಮದರಸಗಳ ಚಟುವಟಿಕೆಗಳನ್ನು ಭಯೋತ್ಪಾದನೆಯ ಮೂಲ ಎಂದು ಈ ರೀತಿ ತ್ವರಿತ ಹೇಳಿಕೆ ನೀಡಿರುವುದು ಅವರ ಆರ್.ಎಸ್.ಎಸ್ ಗುಲಾಮಿತ್ವವನ್ನು ಸೂಚಿಸುತ್ತಿದೆ. ಹರಿಕೃಷ್ಣ ಬಂಟ್ವಾಳ್ ರಿಗೆ ಮುದಿತ್ವ ಪ್ರಾಪ್ತವಾಗಿದ್ದರೂ ಅವರ ಸಮಕಾಲೀನ ಇತರ ನಾಯಕರು ಇಂದೂ ಕೂಡ ಪ್ರಭುದ್ದತೆ ಪಾಲಿಸುತ್ತಿದ್ದಾರೆ. ಇನ್ನಾದರೂ ಹೇಳಿಕೆ ನೀಡುವಾಗ ನಿಖೇತನ ಪ್ರೇರಿತ ಲಿಖಿತ ಚೀಟಿ ಹೊರತಾದ ಹೇಳಿಕೆ ನೀಡಲಿ ಎಂದು ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ