janadhvani

Kannada Online News Paper

ಯುಎಇ ಯಲ್ಲಿ ಭಿಕ್ಷಾಟನೆ ನಡೆಸಿದರೆ ಜೈಲು ಶಿಕ್ಷೆ ಮತ್ತು ಭಾರೀ ದಂಡ

ಅಬುಧಾಬಿ: ಭಿಕ್ಷಾಟನೆ ವಿರುದ್ದ ಕರಡು ರೇಖೆಗೆ ಫೆಡರಲ್ ನ್ಯಾಷನಲ್ ಕೌನ್ಸಿಲ್ ಸಹಿ ಹಾಕಿದೆ. ಕಾನೂನು ಬಾಹಿರವಾಗಿ ದೇಶದಲ್ಲಿ ಭಿಕ್ಷಾಟನೆ ನಡೆಸಿದರೆ ಮೂರು ತಿಂಗಳು ಜೈಲು ಶಿಕ್ಷೆ ಮತ್ತು 5,000 ದಿರ್ಹಂ ದಂಡ ವಿಧಿಸಲಾಗುವುದು.

ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಹೊಸ ಕಾನೂನನ್ನು ಅಂಗೀಕರಿಸಿದ್ದಾರೆ. ಕರಡು ಕಾನೂನು ಪ್ರಕಾರ, ಅಪರಾಧಿಗಳು ಮತ್ತು ಮಧ್ಯವರ್ತಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.

ಭಿಕ್ಷುಕರನ್ನು ಸಂಘಟಿಸುವ ಮಾಫಿಯಾದಂತಹ ಕ್ರಿಮಿನಲ್ ಗುಂಪುಗಳಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 100,000 ದಿರ್ಹಂಗೆ ಕಡಿಮೆಯಾಗದ ದಂಡವನ್ನು ವಿಧಿಸಲಾಗುತ್ತದೆ. ಭಿಕ್ಷಾಟನೆಗಾಗಿ ಜನರನ್ನು ಕರೆತರುವವರಿಗೂ ಇದೇ ಶಿಕ್ಷೆ ಅನ್ವಯಿಸುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ.
ದೇಶಕ್ಕೆ ಭಿಕ್ಷುಕರನ್ನು ಕರೆತರುವ ಮಾಫಿಯಾ ಮುಂತಾದ ಕ್ರಿಮಿನಲ್ ಗ್ಯಾಂಗ್ ಗಳಿಗೆ ಮೂರು ತಿಂಗಳ ಜೈಲು ಮತ್ತು 5,000 ದಂಡವನ್ನು ವಿಧಿಸಲಾಗುತ್ತದೆ. ಈ ಹೊಸ ಕಾನೂನು ಸಂಬಂಧಿತ ವಿವರಗಳನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಗೊಳಿಸಿದ ಒಂದು ತಿಂಗಳ ನಂತರ ಕಾನೂನು ಜಾರಿಯಾಗಲಿದೆ.

error: Content is protected !! Not allowed copy content from janadhvani.com