ಬುರೈದ: ತ್ಯಾಗ, ಬಲಿದಾನಗಳ ಸಂಕೇತವಾದ ಬಲಿ ಪೆರ್ನಾಲ್ ದಿನದಂದು ಬುರೈದ ದಾರುಲ್ ಖ್ಯೆರ್ ನಲ್ಲಿ ಸೇರಿದ ಕರ್ನಾಟಕ ಕಲ್ಚರಲ್ ಪೌಂಡೇಶನ್ ಕೆ.ಸಿ.ಎಫ್ ಅಲ್ ಕಸೀಮ್ ಝೋನ್ ಕಾರ್ಯಕರ್ತರು ಪರಸ್ಪರ ಶುಭಾಶಯ ವಿನಿಮಯ ನಡೆಸಿದರು.
ಈದ್ ಟೂರ್ ಭಾಗವಾಗಿ ಮಧ್ಯಾಹ್ನ ಬುರೈದದಿಂದ ಹೊರಟ ಯಾತ್ರಾ ತಂಡವು ಭೂ ಲೋಕದ ಸ್ವರ್ಗವಾದ ಪುಣ್ಯ ಮದೀನ ಮುನವ್ವರ , ಬದ್ರ್, ಉಹ್ದ್, ಖಂದಕ್,ಸಲ್ಮಾನುಲ್ ಪಾರಿಸಿ ರ.ಅ ರವರ ತೋಟ, ಉಸ್ಮಾನ್ ರ .ಅ ರವರ ತೋಟ ,ಮಸ್ಜಿದುಲ್ ಖುಬಾ, ಮಸ್ಜಿದುಲ್ ಕಿಬ್ಲತೈನಿ ಮಸ್ಜಿದುಲ್ ದರಾ ಹಾಗೂ, ಹಲವಾರು ಚಾರಿತ್ರಿಕ,ಆಧ್ಯಾತ್ಮಿಕ , ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಯಾಂಬು ಸಮುದ್ರ ಕಿನಾರೆಗೆ ತಲುಪಿದ ತಂಡವು ಬೋಟಿಂಗ್, ಈಜು, ಕ್ರಿಡೆಗಳಲ್ಲಿ ಬಾಗವಹಿಸಿ ಹಿಂತಿರುಗಿದ ತಂಡವು ಪುನ: ಮರುದಿನ ಸಾಯಂಕಾಲ ಪ್ರಕೃತಿ ರಮಣಿಯ ಉಯಿನುಲ್ ಜುವಾ ಗಾರ್ಡನ್ ನಲ್ಲಿ ಒಟ್ಟು ಸೇರಿ ವಿಶೇಷ ಮಜ್ಲಿಸ್ ಗಳನ್ನು ನಡೆಸಿದರು.
ದಾರಿಯುದ್ದಕ್ಕೂ ದಿಕ್ರ್, ದುವಾ,ಸ್ವಲಾತ್, ನೆಬಿ ಮದ್ಹ್, ಹಾಗೂ ಕ್ವಿಝ ಗಳನ್ನೊಳಗೊಂಡ ಆತ್ಮೀಯತೆಯಿಂದ ಕೂಡಿದ ಯಾತ್ರೆಗೆ ರಿಯಾದ್, ದವಾದ್ಮಿ, ಅಲ್ ರಾಸ್, ಉನೈಝ ದ ಕಾರ್ಯಕರ್ತರು ಕೈ ಜೋಡಿಸಿ ಅವಿಸ್ಮರಣಿಯಗೊಳಿಸಿದರು.
ಚೀಫ್ ಅಮೀರ್ ಯಾಕೂಬ್ ಸಖಾಫಿ ಸಹ ಅಮೀರ್ ಖಯ್ಯುಂ ಜಾಲ್ಸೂರು ಕಂಟ್ರೋಲರ್ ಸಾಲಿ ಬೆಳ್ಳಾರೆ, ರಶೀದ್ ಸಖಾಫಿ ಮಿತ್ತೂರು ನೇತೃತ್ವ ನೀಡಿದರು.


















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ