janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಸೌದಿ ಅರೇಬಿಯಾ ರಾಷ್ಟೀಯ ಸಮಿತಿ ಹೊರತಂದ
“ಪ್ರವಾಸಿ ಸೌರಭ” ಕೈ ಸೇರಿತು.
ಪುಸ್ತಕ ತೆರೆಯುವಾಗಲೇ ಮೊದಲೆರಡು ಪೇಜ್‌ಗಳಲ್ಲಿ ಎಪಿ ಉಸ್ತಾದರ, ಮತ್ತು ಮಾಣಿ ಉಸ್ತಾದರ ಅರ್ಥಗರ್ಭಿತ ವೈಚಾರಿಕವಾದ ಮುತ್ತಿನಂಥ ಮಾತು ಕೃತಿಗೊಂದು ಮೆರುಗು ನೀಡಿದೆ.

‘ಸಂಪಾದಕೀಯ’ ಕೃತಿಯನ್ನು ಸಂಪನ್ನಗೊಳಿಸಿದೆ.
ಸಂಪಾದಕ, ಉಸ್ತಾದ್ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಬರೆದ ಲೇಖನ ಸಂಘಟಕರು ಅನಿವಾರ್ಯವಾಗಿ ಓದಲೇ ಬೇಕು.
“ಗಲ್ಫ್ ಅಂದರೆ ಉದ್ಯೋಗ ಮಾತ್ರವಲ್ಲ, ನೊಂದವರಿಗೆ ನೆರವಾಗುವ ಮೂಲಕ ಜನ ಸೇವೆಯಲ್ಲಿ ಜನರು ಹೇಗೆಲ್ಲಾ
ತೊಡಗಿಕೊಳ್ಳಬಹುದು, ಸಂಘಟನೆಯಿಂದ ಸಮಾಜಕ್ಕೆ ಉಂಟಾಗುವ ಬೆನ್‌ಫಿಟ್ ಏನು, ಸಂಘಟನೆಯಿಂದ ಪರಿವರ್ತನೆ ಹೇಗೆ ಸಾಧ್ಯ ಎಂಬುದನ್ನು ಸೊಗಸಾಗಿ ಬರೆದಿದ್ದಾರೆ.”
‘ಹಿಜಾಬ್’ ಕುರಿತಾದ ಡಿಪಿ ಉಸ್ತಾದರ ಲೇಖನ ಸ್ವಯಂ ಘೋಷಿತ ದೇಶ ಭಕ್ತರಿಗೊಂದು ಸವಾಲು ಹಾಕಿದಂತಾಗಿದೆ.

ಪೊನ್ಮಳ ಉಸ್ತಾದ್, ಸಯ್ಯಿದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ, ಎಸ್.ಪಿ.ಹಂಝ ಸಖಾಫಿ, ಯೋಗೇಶ್ ಮಾಸ್ಟರ್, ಮುಂತಾದ ಸಾಹಿತ್ಯ ದಿಗ್ಗಜರ ವೈದ್ಯಕೀಯ, ಧಾರ್ಮಿಕ, ಸಾಹಿತ್ಯ, ಇತಿಹಾಸ, ಮುಂತಾದ ವಿಷಯಗಳ ಕುರಿತಾದ ಲೇಖನಗಳು ಓದುಗರ
ಮನ ಮುಟ್ಟಲಿವೆ , ಮೆಚ್ಚುಗೆ ಗಳಿಸಲಿವೆ.
ನೀವೂ ಓದಿ.
ನಿಮ್ಮವರಿಂದ ಓದಿಸಿ..

-ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ) I

error: Content is protected !! Not allowed copy content from janadhvani.com