janadhvani

Kannada Online News Paper

ಮಾದಕತೆ ಪುಸ್ತಕದ ಕುರಿತು ಇಕ್ಬಾಲ್ ಬಾಳಿಲರಿಗೆ ಪತ್ರ ಬರೆದ ಮಾಜಿ ಪೋಲಿಸ್ ಅಧಿಕಾರಿ ಜಿ. ಎ ಬಾವ

ಅಧ್ಯಯನ ನಡೆಸಿ ಬರೆದ ಕೃತಿ ಅತ್ಯುತ್ತಮ ಪುಸ್ತಕ

ಮಂಗಳೂರಿನಲ್ಲಿ ನಡೆದ SKSSF ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಿದ್ದೆ
ಅದು ಬಹಳ ಉಪಯುಕ್ತ ಕಾರ್ಯಕ್ರಮ, ಅಲ್ಲಿ ಇಕ್ಬಾಲ್ ಬಾಳಿಲ ಭಾಷಣ ಮಾಡುತ್ತಿದ್ದರು.
ನಾನು ಹೊರಡುವಾಗ ಸಂಘಟಕರು ನನಗೆ ಒಂದು ಪುಸ್ತಕ ನೀಡಿದ್ದರು. ಉತ್ತಮ ಕೃತಿಗಳನ್ನು ಓದುವುದು ನನ್ನ ಹವ್ಯಾಸ
ಹಾಗೇ ನಾನು ಈ ಪುಸ್ತಕ ಟೈಟಲ್ ನೋಡಿ ಓದಲು ಕುಳಿತೆ.
ಓದುತ್ತಿದ್ದಂತೆ ನನಗೆ 38ವರ್ಷಗಳ ಪೊಲೀಸ್ ಅನುಭವಗಳು ಮೆಲುಕು ಹಾಕುತ್ತಿತ್ತು.
ಈ ಅಮೂಲ್ಯ ಪುಸ್ತಕದ 38 ಅಧ್ಯಾಯವನ್ನು ಓದಿ ಮುಗಿಸಿದ್ದೇನೆ.

ಮಾರಕ ಡ್ರಗ್ಸ್ ಅಪಾಯದ ಕುರಿತು ಸವಿಸ್ತಾರವಾಗಿ ತಿಳಿಸಿದ್ದಾರೆ. ಇದರ ಬಗ್ಗೆ ತುಂಬಾ ಅಧ್ಯಯನ ನಡೆಸಿ ಬರೆದಿರುತ್ತಾರೆ.
ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನ ತನಕ ಹೇಗೆ ಬಳಕೆಯಾಗುತ್ತದೆ ಎಂಬಲ್ಲಿಂದ ಹಿಡಿದು ಇದಕ್ಕಿರುವ ಪರಿಹಾರ ಮಾರ್ಗವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.
ಇದು ಪ್ರತಿಯೊಬ್ಬ ಕನ್ನಡಿಗರ ಮನೆ ಮನೆಗಳಿಗೆ ತಲುಪಬೇಕು
ಪ್ರತೇಕವಾಗಿ ಈ ಕೃತಿಯು ಪೊಲೀಸ್ ಇಲಾಖೆಗೆ ಇತರ ಸರಕಾರಿ ಸಿಬಂದಿಗಳು ಮತ್ತು ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಮಾನಸಿಕ ತಜ್ಞರುಗಳಿಗೆ ಕಡ್ಡಾಯವಾಗಿ ತಲುಪಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.