janadhvani

Kannada Online News Paper

ಖತ್ತರ್ : ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಹಾಗೂ ಸಾಂತ್ವನ ಕ್ಷೇತ್ರ ಗಳಲ್ಲಿ ವಿಶಿಷ್ಟ ರೀತಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ
ಕೆಸಿಎಫ್ ಖತ್ತರ್ ನ ಬಹುಕಾಲದ ಕನಸಾದ ಇಮಾಮ್ ಬುಖಾರಿ ಮದ್ರಸ ದ ಚಾಲನೆ ಯು
ಫತ್ ಹೇ ಮುಬಾರಕ್ ಮೇ 14 ರಂದು ಮದೀನಾ ಖಲೀಫಾದಲ್ಲಿ ನಡೆಯಿತು.

ಮುನೀರ್ ಮಾಗುಂಡಿ ಯವರ ಅಧ್ಯಕ್ಷ ತೆ ಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿಕ್ಷಣ ವಿಭಾಗದ ಕಾರ್ಯದರ್ಶಿ ಖಾಲಿದ್ ಹಿಮಮಿ ಯವರು ಸ್ವಾಗತಿಸಿದರು.

ಖತರ್ ಕೆಸಿಎಫ್‌ ನ ಐ ಎನ್ ಸಿ ನೇತಾರರಾದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಯವರು , ಅನಾದಿ ಕಾಲದಿಂದ ಮದ್ರಸ ಸಂವಿಧಾನ ನಡೆದು ಬಂದ ದಾರಿ,ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ನೀಡುವುದರಲ್ಲಿ ಹೆತ್ತವರ ಕಡ್ಡಾಯ ಜವಾಬ್ದಾರಿ ಯ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಹನೀಫ್ ಪಾತೂರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗೂಳಿ ಹಾಗೂ ಮದ್ರಸ ಅಧ್ಯಾಪಕ ರಾದ ಯಹ್ಯಾ ಸಅದಿ ಯವರು ಆಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ
ಕೆಸಿಎಫ್ ಖತ್ತರ್’ನ ನೇತಾರರಾದ ಹಸನ್ ಪೂಂಜಾಲಕಟ್ಟೆ, ಫಾರೂಖ್ ಕೃಷ್ಣಾಪುರ,ಅಬೂಬಕ್ಕರ್ ಪುತ್ತೂರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com