ಬೆಂಗಳೂರು: ಎಸ್ಸೆಸ್ಸೆಫ್ ಡಿವಿಷನ್ ಕಾನ್ಫರೆನ್ಸ್
ಬೆಂಗಳೂರು: ದ್ವೇಷವನ್ನು ಪ್ರೀತಿಯಿಂದ ಎದುರಿಸುವ ಮೂಲಕ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕು ,ಇಸ್ಲಾಂ ಧರ್ಮ ಎಂದಿಗೂ ದ್ವೇಷವನ್ನು ಬೋಧಿಸುವುದಿಲ್ಲ . ಇಸ್ಲಾಂ ಧರ್ಮದ ವಿರುದ್ದದ ದ್ವೇಷಕಾರುವವರನ್ನು ವಿನಯ ,ಸಾಹೋದರ್ಯತೆಯ ಮೂಲಕ ಎದುರಿಸಬೇಕೆಂದು ಸುನ್ನೀ ಜಂಇಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ಹೇಳಿದರು.
ಅವರು ಎಸ್ ಎಸ್ ಎಫ್ ಬೆಂಗಳೂರು ಜಿಲ್ಲೆ ಆಯೋಜಿಸಿದ
ಡಿವಿಷನ್ ಕಾನ್ಫರೆನ್ಸ್ ಸಮ್ಮೇಳನದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ರವರು ಮಾತನಾಡಿ, ಧರ್ಮ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ಸಂವಿಧಾನವನ್ನು ಅರಿತುಕೊಂಡು ಉಲಮಾಗಳ ನಿರ್ದೇಶನದಂತೆ ಮುಂದುವರಿಯಬೇಕೆಂದು ಹೇಳಿದರು.
ವೇದಿಕೆಯಲ್ಲಿ ಸಯ್ಯದ್ ಸಫ್ವಾನ್ ತಂಙಳ್ , ಸಂಶುದ್ದೀನ್ ಅಝ್ಹರಿ ,ಬಶೀರ್ ಸಅದಿ ಪೀಣ್ಯ, ವಹಾಬ್ ಮೌಲವಿ, ಅಬ್ದುರಹ್ಮಾನ್ ಹಾಜಿ, ಸ್ವಾಲಿಹ್ ಶಿವಾಜಿ ನಗರ, ತಾಜುದ್ದೀನ್ ಫಾಲಿಳಿ, ಹಕೀಂ ಆರ್.ಟಿ.ನಗರ ಉಪಸ್ಥಿತರಿದ್ದರು .
ಶಬೀಬ್ ಸ್ವಾಗತಿಸಿ, ಸ್ವಾದಿಕ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ