ದುಬೈ : ಕಿತ್ತಳೆ ಹಣ್ಣು ಮಾರಿದ ಉಳಿತಾಯದಲ್ಲಿ ಶಾಲೆ ಕಟ್ಟಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಶಣದ ಬಾಗಿಲು ತೆರೆದು ಕೊಟ್ಟ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯುಎಇ ಸಮಿತಿಯ ಗೌರವಾರ್ಪಣೆ ದುಬೈ ನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ನಡೆಯಿತು.
ದುಬೈ ಸರಕಾರದ ಉನ್ನತ ಉನ್ನತ ಅಧಿಕಾರಿ ಶೈಖ್ ಸಲಾ ಮೂಸಾ ಅಲ್ ಮದನಿ ರವರು ಪದ್ಮಶ್ರೀ ಹಾಜಬ್ಬರವರಿಗೆ ಗೌರವಾರ್ಪಣೆ ಮಾಡಿದರು. ಗಲ್ಫ್ ನಾದ್ಯಂತ ಕನ್ನಡ ಕಲಿಸುವ ನಮ್ಮ ಕನ್ನಡ ಕಲಿಕಾ ಪ್ರಾರಂಭೋತ್ಸವ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಂದ ಚಾಲನೆ ನೀಡಲಾಯಿತು.
ಕೆಸಿಎಫ್ ಯುಎಇ ವೆಲ್ಫೇರ್ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ ಎಂ ಮುಮ್ತಾಝ್ ಕೃಷ್ಣಾಪುರ (ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್), ಅಬೂಸ್ವಾಲಿ ಹಾಜಿ (ನಫೀಸ್ ಗ್ರೂಪ್ ದುಬೈ), ಸಯ್ಯದ್ ಶೈಖ್ ಮಖ್ಡೂಮ್, ರೊನಾಲ್ಡ್ ಮಾರ್ಟಿಸ್ (ಬ್ಲೂ ರಾಯಲ್ ಗ್ರೂಪ್), ಅಶ್ರಫ್ ಷಾ ನಂತೂರ್ (ಖೈರಿಯತ್ ಅಲ್ ಶಮ್ಸ್) , ಡಾ ಯೂಸುಫ್ (ಅಧ್ಯಕ್ಷರು ಬಿಸಿಎಫ್ ದುಬೈ), ಅಬ್ದುಲ್ಲಾ ಮದುಮೂಲೆ (ಝಾಯಿದ್ ಫೌಂಡೇಷನ್ ಅಬುಧಾಬಿ), ಇಬ್ರಾಹಿಂ ಗಡಿಯಾರ್, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಪಿ ಕೆ, ರಾಝಿಕ್ ಉಳ್ಳಾಲ, ಮುಹಮ್ಮದ್ ಅಲಿ ಉಚ್ಚಿಲ, ಡಾ ಕಾಪು ಮುಹಮ್ಮದ್, ಹಿದಾಯತ್ ಅಡ್ಡೂರ್, ಎಂಇ ಮೂಳೂರು, ಅಶ್ರಫ್ ಹಾಜಿ ಅಡ್ಯಾರ್, ಲತೀಫ್ ಮುಲ್ಕಿ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಿದ್ದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ