janadhvani

Kannada Online News Paper

ಸೌದಿ: ಇಖಾಮಾ, ಮರು-ಪ್ರವೇಶ ಮಾರ್ಚ್ 31 ರವರೆಗೆ ಉಚಿತ ವಿಸ್ತರಣೆ

ಭಾರತೀಯರು ಸೇರಿದಂತೆ 17 ದೇಶಗಳ ಜನರಿಗೆ ಈ ಪ್ರಯೋಜನ ಲಭ್ಯವಾಗಲಿದೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಇಖಾಮಾ ಮತ್ತು ಮರು-ಪ್ರವೇಶದ ಉಚಿತ ನವೀಕರಣೆ ಗಡುವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಸೌದಿ ದೊರೆ ಈ ಹಿಂದೆ ಹಲವು ಬಾರಿ ಗಡುವನ್ನು ವಿಸ್ತರಿಸಿದ್ದರು. ಕೊನೆಯದಾಗಿ ಜನವರಿ 31ರವರೆಗೆ ಗಡುವು ವಿಸ್ತರಿಸಲಾಗಿತ್ತು. ನಿನ್ನೆ ಮತ್ತೆ ದೊರೆ ಸಲ್ಮಾನ್ ರಾಜಾ ಆದೇಶ ಹೊರಡಿಸಿದ್ದು, ಇನ್ನೂ ದೇಶಕ್ಕೆ ಮರಳಲು ಸಾಧ್ಯವಾಗದವರಿಗೆ ಈ ಅಧಿಸೂಚನೆಯು ಸಮಾಧಾನ ತಂದಿದೆ.

ಭಾರತೀಯರು ಸೇರಿದಂತೆ 17 ದೇಶಗಳ ಜನರಿಗೆ ಈ ಪ್ರಯೋಜನ ಲಭ್ಯವಾಗಲಿದೆ. ಸೌದಿ ಪಾಸ್‌ಪೋರ್ಟ್ ಪ್ರಾಧಿಕಾರವು ಸಂಬಂಧಪಟ್ಟ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸೇರಿದಂತೆ, ಪಾಕಿಸ್ತಾನ, ಈಜಿಪ್ಟ್, ಇಂಡೋನೇಷ್ಯಾ, ಟರ್ಕಿ, ಅಫ್ಘಾನಿಸ್ತಾನ ಮತ್ತು ಬ್ರೆಜಿಲ್‌ನ ಜನರು ಸಹ ಪ್ರಯೋಜನ ಪಡೆಯಲಿದ್ದಾರೆ.

ಕೋವಿಡ್ ನಿರ್ಬಂಧಗಳಿಂದಾಗಿ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದವರಿಗೆ ಮತ್ತೆ ವಿನಾಯಿತಿ ಘೋಷಿಸಲಾಗಿದೆ. ನಿವಾಸ ದಾಖಲೆ, ಮರು-ಪ್ರವೇಶ ವೀಸಾ ಮತ್ತು ಬಳಕೆಯಾಗದ ಸಂದರ್ಶಕರ ವೀಸಾದ ಸಿಂಧುತ್ವವನ್ನು ವಿಸ್ತರಿಸಲಾಗುವುದು. ಜವಾಝಾತ್ ಇಲಾಖೆಯು ಮುಂದಿನ ದಿನಗಳಲ್ಲಿ ಅಂತಹ ವೀಸಾಗಳ ಮಾನ್ಯತೆಯನ್ನು ಸ್ವಯಂಚಾಲಿತವಾಗಿ ನವೀಕರಿಸಲಿದೆ.

error: Content is protected !! Not allowed copy content from janadhvani.com