janadhvani

Kannada Online News Paper

ಇಖಾಮಾ ಮತ್ತು ರೀ ಎಂಟ್ರಿ ಉಚಿತ ವಿಸ್ತರಣೆ- ಈ ತಿಂಗಳ ಕೊನೆವರೆಗೆ ಮಾತ್ರ ಅವಕಾಶ

ನವೀಕರಿಸಿ ಪಡೆಯದಿರುವವರು ಪ್ರಾಯೋಜಕರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ರಿಯಾದ್ :ಸೌದಿ ಅರೇಬಿಯಾದಲ್ಲಿ ಇಖಾಮಾ ಮತ್ತು ಮರು-ಪ್ರವೇಶದ ಉಚಿತ ನವೀಕರಣವು ಈ ತಿಂಗಳು ಕೊನೆಗೊಳ್ಳಲಿದೆ. ಇನ್ನೂ ನವೀಕರಣವನ್ನು ಪಡೆಯದಿರುವವರು ಪ್ರಾಯೋಜಕರನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ವಿಮಾನ ಪ್ರಯಾಣವನ್ನು ನಿಷೇಧಿಸಿದ ದೇಶಗಳಲ್ಲಿನ ವಲಸಿಗರಿಗೆ ಈ ಸೇವೆಯನ್ನು ಲಭ್ಯಗೊಳಿಸಲಾಗಿತ್ತು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಮಾನಗಳ ಮೇಲಿನ ನಿಷೇಧದಿಂದಾಗಿ ರಜೆಯ ನಿಮಿತ್ತ ತೆರಳಿದ್ದ ಅನೇಕ ವಲಸಿಗರು ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರು ವಿವಿಧ ದೇಶಗಳಲ್ಲಿ ಸಿಲುಕಿರುವ ಅಂತಹ ವಲಸಿಗರಿಗೆ ಇಖಾಮಾ ಮತ್ತು ಮರು ಪ್ರವೇಶ ವೀಸಾಗಳನ್ನು ಉಚಿತವಾಗಿ ನೀಡುವಂತೆ ಆದೇಶಿಸಿದ್ದರು. ಇದರ ಪ್ರಕಾರ ಭಾರತೀಯರು ಸೇರಿದಂತೆ ವಲಸಿಗರಿಗೆ ಇಖಾಮಾ, ರೀ ಎಂಟ್ರಿ ವೀಸಾ ಹಾಗೂ ಸಂದರ್ಶಕ ವೀಸಾಗಳನ್ನು ವಿವಿಧ ಹಂತಗಳಲ್ಲಾಗಿ ಉಚಿತವಾಗಿ ವಿಸ್ತರಿಸಿ ನೀಡಲಾಗಿದೆ.ಕೊನೆಯದಾಗಿ ಜನವರಿ 31ರವರೆಗೆ ಉಚಿತವಾಗಿ ನವೀಕರಿಸಲಾಗುತ್ತಿದೆ.

ಭಾರತದಿಂದ ಸೌದಿ ಅರೇಬಿಯಾಕ್ಕೆ ವಿಮಾನಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಬಳಿಕವೂ ಜನವರಿ 31 ರವರೆಗೆ ಉಚಿತವಾಗಿ ನವೀಕರಿಸಲಾಗಿದೆ. ಹಾಗಾಗಿ ಜನವರಿ 31ರ ನಂತರ ಉಚಿತ ನವೀಕರಣಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ. ಜನವರಿ 31 ರ ಮುಂಚಿತವಾಗಿ ನವೀಕರಣಗೊಳ್ಳದಿದ್ದರೆ, ಪ್ರಾಯೋಜಕರನ್ನು ಸಂಪರ್ಕಿಸಿ ಅದರ ಕಾರಣಗಳನ್ನು ಪತ್ತೆ ಹಚ್ಚಿ ಮತ್ತು ಅದನ್ನು ನವೀಕರಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

error: Content is protected !! Not allowed copy content from janadhvani.com