ಮಂಗಳೂರು, ನ.26: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರತಿಭೋತ್ಸವ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಕೃಷ್ಣಾಪುರ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು.
ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪದ್ಮ ಶ್ರೀ ಪುರಸ್ಕತ ಹಾಜಬ್ಬ ಹರೇಕಳರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣಾಪುರ ಖಾಝಿ ಇ.ಕೆ.ಇಬ್ರಾಹಿಮ್ ಮುಸ್ಲಿಯಾರ್, ಪೆರುವಾಯಿ ಹಬೀಬುಲ್ಲಾಹಿ ತಂಙಳ್, ಅಬೂಸುಫ್ಯಾನ್ ಮದನಿ, ಅಲ್ ಮದೀನ ಅಬ್ದುಲ್ ಖಾದರ್ ಸಖಾಫಿ, ಮಾಜಿ ಶಾಸಕ ಮೊಯ್ದೀನ್ ಬಾವ, ಸುಲ್ತಾನ್ ಗೋಲ್ಡ್ ಅಬ್ದುಲ್ ರವೂಫ್, ಕೃಷ್ಣಾಪುರ ಕೇಂದ್ರ ಖತೀಬ್ ಫಾರೂಖ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಕೋಶಾಧಿಕಾರಿ ಸುಫ್ಯಾನ್ ಸಖಾಫಿ, ಅಬ್ದುಲ್ ಸತ್ತಾರ್, ಮಾಜಿ ಕಾರ್ಪೊರೇಟರ್ ಅಯಾಝ್, ಹಮೀದ್, ರಫೀಖ್ ಮಾಸ್ಟರ್, ಅಶ್ರಫ್ ಅಲ್ ಬದ್ರಿಯ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವ ಚಯರ್ಮೇನ್ ಕೆ.ಎಂ ಮುಸ್ತಫಾ ನ ಈಮಿ ಹಾವೇರಿ ಸ್ವಾಗತಿಸಿದರು.ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್ ವಂದಿಸಿದರು.