ರಿಯಾದ್: ಸೌದಿ ವಲಸಿಗರು ಮತ್ತು ಗೃಹ ಕಾರ್ಮಿಕರ ಅವಲಂಬಿತ ವೀಸಾ ಹೊಂದಿರುವವರ ರೆಸಿಡೆನ್ಸಿ ದಾಖಲೆ(ಇಕಾಮಾ) ಯನ್ನು ಇನ್ಮುಂದೆ ದೇಶದ ಹೊರಗಿನಿಂದ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಸೌದಿ ಪಾಸ್‌ಪೋರ್ಟ್ ಜನರಲ್ ಡೈರೆಕ್ಟರೇಟ್ (ಜವಾಝಾತ್) ಅಧಿಕಾರಿಗಳು ಇದನ್ನು ಪ್ರಕಟಿಸಿದ್ದಾರೆ.
ಸೌದಿ ಅರೇಬಿಯಾದಿಂದ ಹೊರಹೋಗುವ ವಲಸಿಗರು ತಮ್ಮ ಸಿಂಗಲ್, ಮಲ್ಟಿಪಲ್ ಎಕ್ಸಿಟ್ ಮತ್ತು ರೀ ಎಂಟ್ರಿ ವೀಸಾಗಳ ಕಾಲಾವಧಿಯನ್ನು ಆನ್‌ಲೈನ್‌ನಲ್ಲಿ ವಿಸ್ತರಿಸಬಹುದು. ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ಗೃಹ ಸಚಿವಾಲಯದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಅಬ್ಶೀರ್ ಮತ್ತು ಮುಖೀಮ್ ಮೂಲಕ ವೀಸಾವನ್ನು ವಿಸ್ತರಿಸಬಹುದು ಮತ್ತು ನವೀಕರಿಸಬಹುದು.