janadhvani

Kannada Online News Paper

ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ (ಐಒಸಿ): ಮಕ್ಕಾ ಕೇಂದ್ರ ಸಮಿತಿ ಅಸ್ತಿತ್ವಕ್ಕೆ

ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಝ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕನ್ನಂಗಾರ್ (ಕೋಶಾಧಿಕಾರಿ )

ಮಕ್ಕಾ: ಕಾಂಗ್ರೆಸ್ ಅಖಿಲ ಭಾರತ ಸಮಿತಿಯ ಅನಿವಾಸಿ ಸಂಘಟನೆಯಾದ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ (ಐಒಸಿ) ಸಮಿತಿಯ ಅಧೀನದಲ್ಲಿ ಮಕ್ಕಾ ಕೇಂದ್ರ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ. ಐಒಸಿ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಾವೇದ್ ಮಿಯಾಂದಾದ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಾ ಅಝೀಝಿಯಾದ ಪಾನೂರ್ ರೆಸ್ಟೋರೆಂಟ್ ಹಾಲ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೊದಲ ಐಒಸಿ ಮಕ್ಕಾ ಕೇಂದ್ರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಹಿರಿಯ ಮುಖಂಡ ಶಾನಿಯಾಝ್ ಕುನ್ನಿಕೋಡ್ ಮಂಡಿಸಿದ ಪದಾಧಿಕಾರಿಗಳ ಪಟ್ಟಿಯನ್ನು ಸಭೆಯು ಸರ್ವಾನುಮತದಿಂದ ಅನುಮೋದಿಸಿತು. ರಾಷ್ಟ್ರೀಯ ಅಧ್ಯಕ್ಷ ಜಾವೇದ್ ಮಿಯಾಂದಾದ್ ಅವರನ್ನು ಝಾಕೀರ್ ಕೊಡುವಳ್ಳಿ ಶಾಲು ಹೊದಿಸಿ ಬರಮಾಡಿಕೊಂಡರು.

ಐಒಸಿ ಮಕ್ಕಾ ಕೇಂದ್ರ ಸಮಿತಿಯ ಪದಾಧಿಕಾರಿಗಳು:

ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಝ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕನ್ನಂಗಾರ್ (ಕೋಶಾಧಿಕಾರಿ ), ಹಾರಿಸ್ ಮನ್ನಾರ್ಕಾಡ್, ನಿಝಾಮ್ ಕಾಯಂಕುಳಂ, ಮುಹಮ್ಮದ್ ಶಾ ಪೊರುವಝಿ, ಇಕ್ಬಾಲ್ ಗಬ್ಗಲ್, ಶಮ್ನಾಸ್ ಮೀರಾನ್ ಮೈಲೂರು (ಉಪಾಧ್ಯಕ್ಷರು) , ರಫೀಖ್ ವರಾಂದರಪಿಳ್ಳಿ, ಅಬ್ದುಲ್ ಸಲಾಂ ಅಡಿವಾಡ್, ಅನ್ವರ್ ಇಡಪಳ್ಳಿ, ನಿಝಾ ನಿಝಾಮ್ (ಪ್ರಧಾನ ಕಾರ್ಯದರ್ಶಿ), ಸರ್ಫರಾಝ್ ತಲಶ್ಶೇರಿ (ಜಂಟಿ ಖಜಾಂಚಿ), ಶಮ್ಸ್ ವಡಕಂಚೇರಿ, ಜೈಸ್ ಓಚಿರ, ಶಾಜಹಾನ್ ಕರುನಾಗಪ್ಪಳ್ಳಿ, ಫಿರೋಝ್ ಎಡಕ್ಕರ, ಅಬ್ದುಲ್ ವಾರಿಸ್ ಅರೀಕೋಡ್, ರಫೀಕ್ ಕೋಝಿಕ್ಕೋಡ್, ಹಮ್ಝ ಮನ್ನಾರ್ಕ್ಕಾಡ್, ಜಾಸಿಂ ಕಲ್ಲಡ್ಕ, ಶಿಮಾ ನೌಫಲ್, ರೋಶ್ನ ನೌಶಾದ್, ಸಮೀನಾ ಝಾಕಿರ್ ಹುಸೈನ್ (ಕಾರ್ಯದರ್ಶಿ), ಅಬ್ದುಲ್ ಕರೀಂ ವರಂತರಪಿಳ್ಳಿ (ಕಲ್ಯಾಣ ವಿಭಾಗದ ಅಧ್ಯಕ್ಷರು), ಅಬ್ದುಲ್ ಕರೀಂ ಪೂವಾರ್ (ಕ್ರೀಡಾ ವಿಭಾಗದ ಅಧ್ಯಕ್ಷರು), ನೌಶಾದ್ ಕಣ್ಣೂರು (ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರು), ನೌಫಲ್ ಕರುನಾಗಪಿಳ್ಳಿ (ಸಾಂಸ್ಕೃತಿಕ ವಿಭಾಗದ ಸಂಚಾಲಕರು), ರಫೀಕ್ ಕೋದಮಂಗಲಂ (ಕೇರಳ ರಾಜ್ಯ ಸಂಯೋಜಕರು),ಜಲೀಲ್ ಜಬ್ಬಾರ್ ಅಬರಾಜ್ (ಕರ್ನಾಟಕ ರಾಜ್ಯ ಸಂಯೋಜಕ), ಅಬ್ದುಲ್ ಅಝೀಝ್(ತಮಿಳುನಾಡು ರಾಜ್ಯ ಸಂಯೋಜಕ), ಮುಹಮ್ಮದ್ ಚೌಧರಿ (ತೆಲಂಗಾಣ ರಾಜ್ಯ ಸಂಯೋಜಕ), ಮುಹಮ್ಮದ್ ಅಸ್ಲಂ (ಉತ್ತರ ಪ್ರದೇಶ ರಾಜ್ಯ ಸಂಯೋಜಕ), ಮುಹಮ್ಮದ್ ಸದ್ದಾಂ ಹುಸೈನ್ ( ಬಿಹಾರ ರಾಜ್ಯ ಸಂಯೋಜಕ), ಮನ್ಸೂರ್ ಬಾಬಾ (ಜಮ್ಮು ಮತ್ತು ಕಾಶ್ಮೀರ ಸಂಯೋಜಕ), ಹುಸೈನ್ ಕಣ್ಣೂರು, ಶರಫುದ್ದೀನ್ ಪುಝಿಕುನ್ನತ್ತ್, ಹಬೀಬ್ ಕೋಝಿಕ್ಕೋಡ್, ರಿಯಾಝ್ ವರ್ಕಲ, ಮುಹಮ್ಮದ್ ಹಸನಬ್ಬ ಮಂಗಳೂರು, ಮುಹಮ್ಮದ್ ಶಾಫಿ ಕುಝಿಂಬಾಡನ್, ಶಮ್ನಾದ್ ಕಡೈಕಲ್, ಶಿಹಾಬ್ ಕಡೈಕಲ್ (ಕಾರ್ಯಕಾರಿ ಸಮಿತಿ). ಮುಂತಾದವರನ್ನು ಆಯ್ಕೆ ಮಾಡಲಾಗಿದೆ.

error: Content is protected !! Not allowed copy content from janadhvani.com