ದೋಹಾ : ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿ ವತಿಯಿಂದ ವೆಲ್ಕಮ್ ಆನ್ ಬೋರ್ಡ್ ಕಾರ್ಯಗಾರವು ದಿನಾಂಕ 03-01-2025 ರಂದು ಜುಮಾ ನಮಾಝಿನ ಬಳಿಕ ದೋಹಾದ ಏಶಿಯನ್ ಟೌನ್ ಸಭಾಂಗಣದಲ್ಲಿ ನಡೆಯಿತು.

ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಸತ್ತಾರ್ ಅಶ್ರಫಿ ಮಠ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವು , ರಾಷ್ಟ್ರೀಯ ನಾಯಕರು ಹಾಗೂ ಅಂತಾರಾಷ್ಟ್ರೀಯ ಸಮಿತಿ ಸದಸ್ಯರಾದ ಯೂಸುಫ್ ಸಖಾಫಿ ಯವರಿಂದ ಉದ್ಘಾಟನೆಗೊಂಡಿತು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಅಲ್ಲಾಹನ ಮಾರ್ಗದಲ್ಲಿ ಸಂಘಟನೆಯಲ್ಲಿ ಕಾರ್ಯಚರಿಸುವುದರ ಮಹತ್ವ ಬಗ್ಗೆ ವಿವರಿಸಿದರು.
ಅನಂತರ ಮಾತನಾಡಿದ ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಕೃಷ್ಣಾಪುರ ರವರು ಸಾಮಾಜಿಕ ಜಾಗೃತಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಚಟುವಟಿಕೆ ಯಾವ ರೀತಿಯಲ್ಲಾಗಿರಬೇಕೆಂಬುದುರ ಉಪಯುಕ್ತ ಮಾಹಿತಿಯನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮ ಮುಂದುವರಿಯುತ್ತಾ, ಕೆ.ಸಿ.ಎಫ್ ಖತರ್ ಸಮಿತಿಯ ಪ್ರತಿ ವಿಭಾಗಗಳ ಅಧೀನದಲ್ಲಿ ನಡೆಯಬೇಕಾದ ಮುಂದಿನ ಕಾರ್ಯಯೋಜನೆಯ ಸಂಪೂರ್ಣ ವಿವರಗಳನ್ನೊಳಗೊಂಡ ಮಾಹಿತಿಯನ್ನು ಆಯಾಯ ವಿಭಾಗಗಳ ಕಾರ್ಯದರ್ಶಿಗಳು ವಿವರಿಸಿದರು. ಸಂಘಟನಾ ವಿಭಾಗ ಫಾರೂಖ್ ಜೆಪ್ಪು, ಶಿಕ್ಷಣ ಹಾಗೂ ಸಾಂತ್ವನ ವಿಭಾಗ ರಿಶಾದ್ ಮದುವಣ, ಆಡಳಿತ ವಿಭಾಗ ಹಕೀಂ ಪಾತೂರು, ಇಹ್ಸಾನ್ ವಿಭಾಗ ಸತ್ತಾರ್ ಅಶ್ರಫಿ ಮಠ, ಪ್ರೊಫೆಶನ್ ಹಾಗೂ ಪಬ್ಲಿಕೇಶನ್ ವಿಭಾಗ ಝಕರಿಯ್ಯಾ ಸಂಜಾದ್ ಇದರ ನೇತ್ರತ್ವ ವಹಿಸಿದ್ದರು.
ಕೆ.ಸಿ.ಎಫ್ ಖತ್ತರ್ ನಾಯಕರೂ ಹಾಗೂ ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಕಾರ್ಯದರ್ಶಿ ಹಾಫಿಳ್ ಉಮರ್ ಫಾರೂಖ್ ಸಖಾಫಿ ಕೊಡಗು ರವರು ಅಝೀಝಿಯಾ,ಮದೀನಾ ಖಲೀಫಾ, ದೋಹಾ ಹಾಗೂ ವಕ್ರ ಝೋನ್ ಮೇಲ್ವಿಚಾರಕರಾಗಿ ಹನೀಫ್ ಪಾತೂರು, ಸತ್ತಾರ್ ಅಶ್ರಫಿ ಮಠ, ಮಿರ್ಶಾದ್ ಕನ್ಯಾನ, ಸದಕತುಲ್ಲಾ ಕೂಳೂರವರ ಹೆಸರನ್ನು ಘೋಷಿಸಿದರು.
ಕಾರ್ಯಕ್ರಮದ ಕೊನೆಯ ಭಾಗವಾಗಿ, ರಾಷ್ಟ್ರೀಯ ಸಮಿತಿ ವತಿಯಿಂದ ಝೋನ್ ಕಾರ್ಯಚಟುವಟಿಕೆಯ ನಿರ್ವಹಣೆಗಾಗಿ ಅಗತ್ಯವಿರುವ ನೋಟ್ ಬುಕ್ ವಿತರಣೆ ಹಾಗೂ ಕಾರ್ಯಕರ್ತರ ಪರಸ್ಪರ ಪರಿಚಯ ಕೂಡಾ ನಡೆಯಿತು.
ವೇದಿಕೆಯಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಕಬೀರ್ ಹಾಜಿ ದೇರಳಕಟ್ಟೆ, ಅಝೀಝಿಯಾ ಝೋನ್ ಅಧ್ಯಕ್ಷರಾದ ಶೆರೀಫ್ ಸಖಾಫಿ ಉಪಸ್ಥಿತರಿದ್ದರು.
ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಫಾರೂಖ್ ಜೆಪ್ಪು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ವಂದಿಸಿದರು.
ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಕಾರ್ಯದರ್ಶಿ ರಿಶದ್ ಮಧುವಣ ಕಾರ್ಯಕ್ರಮ ನಿರೂಪಿಸಿದರು.