janadhvani

Kannada Online News Paper

ಏರ್ಟೆಲ್ ಗ್ರಾಹಕರ ಕಿಸೆಗೆ ಕತ್ತರಿ: ಶೇ.25ರಷ್ಟು ಟ್ಯಾರಿಫ್ ಹೆಚ್ಚಳ- ನ. 26ರಿಂದ ಜಾರಿ

28 ದಿನಗಳ ಪ್ರಿಪೇಡ್ ಪ್ಯಾಕೇಜ್ ನಲ್ಲಿ ಅನ್ ಲಿಮಿಟೆಡ್ ದೂರವಾಣಿ ಕರೆ, ಪ್ರತಿ ದಿನ 100 ಎಸ್ಎಂಎಸ್ ಹಾಗೂ 2 ಜಿಬಿ ಇಂಟರ್ ನೆಟ್ ಪಡೆಯೋದಕ್ಕೆ ಇನ್ಮುಂದೆ 179 ರೂಪಾಯಿ ನೀಡಬೇಕಾಗುತ್ತದೆ.

ಮುಂಬೈ, ನ 22 : ಏರ್‌ಟೆಲ್ ತನ್ನ ಪ್ರಿಪೇಯ್ಡ್ ಪ್ಯಾಕೇಜ್ ಗಳ ತೆರಿಗೆ ಹೆಚ್ಚಿಸಿದೆ. ಹೊಸ ದರಗಳು ನವೆಂಬರ್ 26ರಿಂದ ಜಾರಿಗೆ ಬರಲಿದ್ದು, ಶೇಕಡಾ 25ರಷ್ಟು ಟ್ಯಾರಿಫ್ ಹೆಚ್ಚಿಸುವ ಘೋಷಣೆ ಮಾಡಿದೆ. ಶುಕ್ರವಾರದಿಂದ ಈ ಬದಲಾದ ರೇಟ್ ಗಳು ಜಾರಿಗೆ ಬರುವುದರಿಂದ ಏರ್ ಟೆಲ್ ಗ್ರಾಹಕರು, 28 ದಿನಗಳ ಪ್ರಿಪೇಡ್ ಪ್ಯಾಕೇಜ್ ನಲ್ಲಿ ಅನ್ ಲಿಮಿಟೆಡ್ ದೂರವಾಣಿ ಕರೆ, ಪ್ರತಿ ದಿನ 100 ಎಸ್ಎಂಎಸ್ ಹಾಗೂ 2 ಜಿಬಿ ಇಂಟರ್ ನೆಟ್ ಪಡೆಯೋದಕ್ಕೆ ಇನ್ಮುಂದೆ 179 ರೂಪಾಯಿ ನೀಡಬೇಕಾಗುತ್ತದೆ. ಈ ಮೊದಲು ಈ ಎಲ್ಲ ಅವಕಾಶಗಳನ್ನು 149 ರೂಪಾಯಿಯಲ್ಲಿ ಮೊಬೈಲ್ ಗ್ರಾಹಕರು ಪಡೆಯುತ್ತಿದ್ದರು.

ಉತ್ತಮ ಮತ್ತು ಆರೋಗ್ಯಕರ ವ್ಯಾಪಾರಕ್ಕಾಗಿ ದರಗಳನ್ನು ಹೆಚ್ಚಿಸುವುದು ಅಗತ್ಯ ಎಂದು ಭಾರ್ತಿ ಏರ್‌ಟೆಲ್ ಹೇಳಿದೆ. ಪ್ರತಿ ಬಳಕೆದಾರರಿಂದ ಸರಾಸರಿ ಆದಾಯ (ARPU) 200 ರೂ ಆಗಿರಬೇಕು ಮತ್ತು ನಂತರ ಅದನ್ನು 300 ರೂಗೆ ಹೆಚ್ಚಿಸಬೇಕಾಗಿದೆ ಅಂತಾ ತಿಳಿಸಿದೆ. ಇದರಿಂದ ಹೂಡಿಕೆ ಮಾಡಿದ ಬಂಡವಾಳಕ್ಕೆ ಸರಿಯಾದ ಲಾಭವನ್ನು ಕಂಪನಿಗಳು ಪಡೆಯಲು ಸಾಧ್ಯ ಅಂತಾ ತಿಳಿಸಿದೆ.

error: Content is protected !! Not allowed copy content from janadhvani.com