janadhvani

Kannada Online News Paper

ಮದೀನಾ ರೌಳಾ ಪ್ರವೇಶಕ್ಕೆ ನಿಯಂತ್ರಣ-ತಿಂಗಳಿಗೆ ಒಮ್ಮೆ ಮಾತ್ರ ಪ್ರವೇಶಾನುಮತಿ

ಆದರೆ ಮದೀನಾದ ಮಸೀದಿ ಅಲ್-ನಬವಿಯಲ್ಲಿ ಪ್ರಾರ್ಥನೆ ಮಾಡಲು ಈ ನಿಯಂತ್ರಣವಿಲ್ಲ.

ಮದೀನ ಮುನವ್ವರ: ಮದೀನಾದಲ್ಲಿರುವ ರೌಳಾ ಶರೀಫ್‌ಗೆ ಪ್ರವೇಶವನ್ನು ನಿಯಂತ್ರಿಸಲಾಗಿದೆ. ರೌಳಾ ಷರೀಫ್‌ಗೆ ಮೂವತ್ತು ದಿನಕ್ಕೆ ಒಮ್ಮೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಆದಾಗ್ಯೂ, ಮದೀನಾದ ಹರಮ್ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಎರಡು ಡೋಸ್ ಲಸಿಕೆಯನ್ನು ಸ್ವೀಕರಿಸಿದವರಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.
ಸಂದರ್ಶಕರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿಯಂತ್ರಣವನ್ನು ಏರ್ಪಡಿಸಲಾಗಿದೆ. ಒಮ್ಮೆ ರೌಲಾ ಷರೀಫ್‌ ಪ್ರವೇಶಿಸಿ, ಪ್ರಾರ್ಥನೆಯನ್ನು ಪೂರ್ಣಗೊಳಿಸಿ, 30 ದಿನಗಳ ನಂತರವಷ್ಟೇ ಮತ್ತೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ತವಕ್ಕಲ್ನಾ ಮತ್ತು ಇಅ್ ತಮರ್ನಾ ಆಪ್ ಮೂಲಕ ಅನುಮತಿ ಲಭ್ಯ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಎರಡು ಡೋಸ್ ಕೋವಿಡ್ ಲಸಿಕೆ ಪಡೆಯದವರಿಗೆ ಅನುಮತಿಸಲಾಗುವುದಿಲ್ಲ.ಆದರೆ ಮದೀನಾದ ಮಸೀದಿ ಅಲ್-ನಬವಿಯಲ್ಲಿ ಪ್ರಾರ್ಥನೆ ಮಾಡಲು ಈ ನಿಯಂತ್ರಣವಿಲ್ಲ.
ರಾತ್ರಿ ಇಶಾ ನಮಾಝ್‌ನಿಂದ ಬೆಳಗಿನ ನಮಾಝ್‌ನವರೆಗೆ ಮತ್ತು ಬೆಳಗಿನ ನಮಾಝ್‌ನಿಂದ ಮಧ್ಯಾಹ್ನದ ಲುಹರ್ ನಮಾಝ್‌ವರೆಗೆ ಮಹಿಳೆಯರಿಗೆ ರೌಳಾ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಹರಮ್ ವ್ಯವಹಾರಗಳ ಸಚಿವಾಲಯ ಈ ಹಿಂದೆ ಹೇಳಿತ್ತು. ಉತ್ತರ ಭಾಗದ ಬಾಗಿಲು 24 ರ ಬಾಬ್ ಉಸ್ಮಾನಿ ಬಿನ್ ಅಫ್ಫಾನ್ ಮತ್ತು ದಕ್ಷಿಣದಲ್ಲಿ 37 ರ ಬಾಬ್ ಮಕ್ಕಾ ಮೂಲಕವಾಗಿದೆ ಮಹಿಳೆಯರಿಗೆ ಪ್ರವೇಶ.

error: Content is protected !! Not allowed copy content from janadhvani.com