ರಿಯಾದ್: ಸೌದಿ ಅರೇಬಿಯಾದ ಅಲ್ ಉಲಾ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಪ್ರಥಮ ಹಾರಾಟವನ್ನು ಫ್ಲೈನಾಸ್ ಏರ್ಲೈನ್ ದುಬೈನಿಂದ ನಡೆಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಆರಂಭಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಅಲ್ ಉಲಾ ಪ್ರಿನ್ಸ್ ಅಬ್ದುಲ್ ಮಜೀದ್ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿತ್ತು.
ನಾಗರಿಕ ವಿಮಾನಯಾನ ಜನರಲ್ ಅಥಾರಿಟಿ ತಿಂಗಳ ಹಿಂದೆ ಅಂತಾರಾಷ್ಟ್ರೀಯ ಸೇವೆಗಳ ಆರಂಭಕ್ಕೆ ಅನುಮತಿ ನೀಡಿತ್ತು. ಇದರ ನಂತರ ಫ್ಲೈನಾಸ್‌ನ ಮೊದಲ ಅಂತಾರಾಷ್ಟ್ರೀಯ ಸೇವೆಯು ಅಲ್ ಉಲಾ ವಿಮಾನ ನಿಲ್ದಾಣದಿಂದ ಆರಂಭಗೊಂಡಿದೆ.ದುಬೈನಿಂದ ಪ್ರಯಾಣಿಕರನ್ನು ಹೊತ್ತು ತಂದ ವಿಮಾನವನ್ನು ಜಲಫಿರಂಗಿಗಳ ಮೂಲಕ ದ್ವಾರ ನಿರ್ಮಿಸಿ ವಿಮಾನ ಸ್ವಾಗತಿಸಲಾಯ್ತು. ಶೀಘ್ರದಲ್ಲೇ ಹೆಚ್ಚಿನ ದೇಶಗಳ ಸೇವೆ ಲಭ್ಯವಾಗಲಿದೆ.
ಈ ತಾಣವು 008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದು ವಿಶ್ವದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಅಂಶವಾಗಿದೆ. ಶತಮಾನಗಳ ಕಥೆಯನ್ನು ಹೇಳುವ ಅಲ್ ಉಲಾ ಪ್ರಾಚೀನ ನಾಗರಿಕತೆಯ ನೇರ ಉದಾಹರಣೆಯಾಗಿದೆ.2035ರ ವೇಳೆಗೆ, ವರ್ಷಕ್ಕೆ 20 ಲಕ್ಷ ಪ್ರವಾಸಿಗರಿಗೆ ಆತಿಥ್ಯ ನೀಡಬಹುದಾದ ಬೃಹತ್ ಪ್ರವಾಸೋದ್ಯಮ ಯೋಜನೆಗಳನ್ನು ಅಲ್ ಉಲಾ ರಾಯಲ್ ಕಮಿಷನ್ ಅನುಷ್ಠಾನಗೊಳಿಸುತ್ತಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ