janadhvani

Kannada Online News Paper

ಕೆಸಿಎಫ್ ಕುವೈಟ್: ಇಶ್ಕ್-ಎ-ರಸೂಲ್ (ﷺ) ಮೀಲಾದ್ ಕಾನ್ಫರೆನ್ಸ್ ಯಶಸ್ವಿ

ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆಸಿಎಫ್ ಕುವೈಟ್ ವತಿಯಿಂದ
ವರ್ಷಂಪ್ರತಿ ನಡೆಸಿಕೊಂಡು ಬರುವಂತಹ ಈದ್ ಮೀಲಾದ್ ಕಾರ್ಯಕ್ರಮದ ಅಂಗವಾಗಿ ಇಶ್ಕ್-ಎ-ರಸೂಲ್ (ﷺ) ಮೀಲಾದ್ ಕಾನ್ಫರೆನ್ಸ್ 2021ನವೆಂಬರ್ ತಿಂಗಳ 4&5 ರಂದು ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.

ಕೆಸಿಎಫ್ ಕುವೈಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಝಕರಿಯ್ಯಾ ಆನೆಕಲ್ ಸ್ವಾಗತಿಸಿದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಸದಸ್ಯರಾದ ಬಹುಮಾನ್ಯ ಉಮರುಲ್ ಫಾರೂಕ್ ಸಖಾಫಿ ಉದ್ಘಾಟಿಸಿದರು. ಕೆಸಿಎಫ್ INC ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಮತ್ತು ಕೆಸಿಎಫ್ ಕುವೈಟ್ ಸಂಘಟನಾ ಅಧ್ಯಕ್ಷ ಬಹುಮಾನ್ಯ ಉಮರ್ ಝುಹುರಿ ಉಸ್ತಾದ್,ಕೆಸಿಎಫ್ ಕುವೈಟ್ ಸೌತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಉಪಸ್ಥಿತರಿದ್ದರು.ಹಾಗೂ ರಾಷ್ಟ್ರೀಯ, ಝೋನ್ ಸೆಕ್ಟರ್ ನಾಯಕರು ಸದಸ್ಯರು ಭಾಗವಹಿಸಿರು.

ಮದನೀಯಂ ಖ್ಯಾತಿಯ ಬಹುಮಾನ್ಯ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಅವರಿಂದ ನೆರಪ್ರಸಾರ ಕಾರ್ಯಕ್ರಮವು ಬರ್ಕ ಗಾರ್ಡನ್ ನಲ್ಲಿ ನಡೆಯಿತು ಕೆಸಿಎಫ್ ಕುವೈಟ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಬಾದಾಷ ಸಖಾಫಿ ಸ್ವಾಗತದೊಂದಿಗೆ ಬಹುಮಾನ್ಯ GM ಕಾಮಿಲ್ ಸಖಾಫಿ ಉಸ್ತಾದರ ಉದ್ಘಾಟನೆಯೊಂದಿಗೆ ಬಹುಮಾನ್ಯ ಅಬ್ದುಲ್ ಲತೀಫ್ ಸಖಾಫಿ ಮದನಿಯಂ ಅವರು ಮುಖ್ಯ ಪ್ರಭಾಷಣದಲ್ಲಿ KCF ಕುವೈಟ್ ಸಂಘಟನೆಯ ಕೆಲಸವನ್ನು ಹಾಗೂ ಸಾಂತ್ವನದ ಕೊಡುಗೆಯನ್ನು ಶ್ಲಾಘಿಸಿದರು.

ಹೊಟ್ಟೆ ಮತ್ತು ಬಟ್ಟೆಗಾಗಿ, ಹೆಂಡತಿ ಮಕ್ಕಳಿಗಾಗಿ,ತಂದೆ ತಾಯಿ ಹಾಗೂ ಒಡಹುಟ್ಟಿದವರಿಗಾಗಿ ಅವರ ಬಾಳಿಗೆ,ಬದುಕಿಗೆ ಸಹಾಯ ವಾಗಲು ವಿದೇಶಗಳಲ್ಲಿ ಉದ್ಯೋಗ ಅರಸಿ ಹೋಗುವ ಅನಿವಾಸಿ ಮಿತ್ರರ ಸಂಘಟನೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕೆಸಿಎಫ್ INC ಆಡಳಿತ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಬರಕ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು.

ನವೆಂಬರ್ 5ಶುಕ್ರವಾರ ಬೆಳಿಗ್ಗೆ ಸುಬಹಿ ನಮಾಝ್ ನಂತರ ಜನಾಬ್ ಇಂಜಿನಿಯರ್ ಅಬುಬಕರ್ ಸಿದ್ದೀಕ್ Executiv, Risala Study Circle (RSC), Gulf Council ಅವರಿದ ಸಂಘಟನಾ ತರಗತಿ ನಡೆಯಿತು.
ಮಹಿಳೆರಿಗೆ ವಿಶೇಷ ತರಗತಿಯನ್ನು KOC ಅಹ್ಮದಿ ಹಾಸ್ಪಿಟಲ್ ನ ರೇಷ್ಮಾ ಅಬ್ದುಲ್ ರಝಾಕ್ ಅವರು ಮಹಿಳಾ ಅರೋಗ್ಯ ಬಗ್ಗೆ ವಿವರಿಸದರು. ವಿವಿಧ ಸ್ಫರ್ಧೆ ಗಳಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ವಿಶೇಷ ಪ್ರೋತ್ಸಾಹ ಬಹುಮಾನ ನೀಡಿ ಗೌರವವಿಸಲಾಹಿತು.ಝೋನ್ ಹಾಗೂ ಸೆಕ್ಟರ್ ನಾಯಕರಿಗೆ pick and speak ಸ್ಪರ್ಧೆ ಯು ಎಲ್ಲಾರ ಗಮನವು ಕಾರ್ಯಕ್ರಮದಲ್ಲಿ ಇದ್ದು ವಿಶೇಷ ಬಹುಮಾನವನ್ನು ಝೋನ್ ಹಾಗೂ ಸೆಕ್ಟರ್ ನಾಯಕರಿಗೆ ನೀಡಿ ಪ್ರೋತ್ಸಾಹಿಸಲಾಹಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೆಸಿಎಫ್ ಕುವೈಟ್ ಸಾಂತ್ವಾನ ಅಧ್ಯಕ್ಷರಾದ ಜನಾಬ್ ಯಾಕೂಬ್ ಕಾರ್ಕಳ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಬಹುಮಾನ್ಯ ಅಬ್ದುಲ್ ರಹಿಮಾನ್ ಸಖಾಫಿ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು, ದುಃಅ ಉಮರ್ ಝುಹರಿ ನೆರೆವೇರಿಸಿದರು.

ಬ್ರಾಂಚ್ ಮ್ಯಾನೇಜೆರ್ ಬದರ್ ಸಮ ಕ್ಲಿನಿಕ್ ಜನಾಬ್ ಅಬ್ದುಲ್ ರಝಾಕ್ ಮಾತನಾಡಿ ಕೆಸಿಎಫ್ ಕುವೈಟ್ ನಡೆಸಿದ ಕಾರ್ಯವೈಕರಿಯ ಮೆಚ್ಚುವಂತಹದು ಹೇಳಿ ಶುಭ ಕೋರಿದರು,
ಜನಾಬ್ ಅಬ್ಬಾಸ್ ಬಳ್ಳಾಜೆ ಅವರ ಸಂಘಟನೆಗೆ ನೀಡಿದ ಸಹಕಾರ ಅತ್ಯಮೂಲ್ಯ ಅವರನ್ನು ರಾಷ್ಟ್ರೀಯ ಸಮಿತಿಯು ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವರಹಿಸಲಾಯಿತು.

ಕಾರ್ಯಕ್ರಮಕ್ಕೆ ಆನ್ಲೈನ್ ಮುಖಾಂತರ ಕರ್ನಾಟಕ MLC ಜನಾಬ್ BM ಫಾರೂಕ್ KCF ಕುವೈಟ್ ಸಂಘಟನೆಯ ಸಾಂತ್ವನ ದ ಬಗ್ಗೆ ಹಾಗೂ ಇಹ್ಸಾನ್ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ KCF INC ಯ ಬಹು ಹುಸೈನ್ ಎರುಮಾಡ್, ಬಹು ಫಾರೂಕ್ ಸಖಾಫಿ, ಮಹಿಮ್ ಸಖಾಫಿ, ಬಶೀರ್ ಸಖಾಫಿ,ಮೂಸ ಇಬ್ರಾಹಿಮ್, ಇಬ್ರಾಹಿಂ ವೇಣೂರ್,ಇಕ್ಬಾಲ್ ಕಂದಾವರ, ತೌಫಿಕ್ ಕಾರ್ಕಳ, ಇಂಜಿನಿಯರ್ ಸಮೀರ್ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ನಾಯಕರು ಹಾಜರಿದ್ದರು. ಮುಸ್ತಫಾ ಉಳ್ಳಾಲ್ ಧನ್ಯವಾದಗೈದರು.

error: Content is protected !! Not allowed copy content from janadhvani.com