janadhvani

Kannada Online News Paper

ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನಕ್ಕೆ ದ.ಕ.ಜಿಲ್ಲೆಯಲ್ಲಿ ಚಾಲನೆ

ಜೋಯಿಸ್ ದಿ ಬೆಸ್ಟ್ ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನವೆಂಬರ್ 01 ರಿಂದ 30 ರ ತನಕ ರಾಜ್ಯದಾದ್ಯಂತ ಸದಸ್ಯತ್ವ ಅಭಿಯಾನವು ನಡೆಯಲಿದ್ದು ಅದರ ಸದಸ್ಯತ್ವ ದಿನವಾದ ನವೆಂಬರ್ 1 ರಂದು ದಕ್ಷಿಣ ಕನ್ನಡ ಜಿಲ್ಲೆಯ 8 ತಾಲೂಕು ಸಮಿತಿಯ ಮುಖ್ಯ ಪದಾಧಿಕಾರಿಗಳ ಸಭೆ ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಿತು
ಬೆಳ್ತಂಗಡಿ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಎಸ್ ಎಮ್ ತಂಙಳ್ ರವರ ದುಆ ದೊಂದಿಗೆ ಚಾಲನೆ ಗೊಂಡಿತು.

ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬೈತಡ್ಕ,
ಉಳ್ಳಾಲ ತಾಲೂಕು ಅಧ್ಯಕ್ಷ ಆಲಿಕುಂಞ ಹಾಜಿ ಪಾರೆ,
ಸುಳ್ಯ ತಾಲೂಕು ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ನಾಯಕರಾದ ಬಿ ಎ ನಝೀರ್,ಇಕ್ಬಾಲ್ ,ಅದ್ದು ಹಾಜಿ ಪ್ರಿಟೆಂಕ್,ಸಲೀಂ ಅಡ್ಯಾರ್, ಕೈಯ್ಯಾರ ಯೂಸುಫ್ ಹಾಜಿ, ಕುಕುವಳ್ಳಿ ಮುಮ್ಮದ್ ಹಾಜಿ,ಶುಕೂರ್ ಹಾಜಿ, ಜಲೀಲ್ ಬೈತಡ್ಕ, ಹಮೀದ್ ಕನಕಮಜಲು, ಉಮರ್ ಗೂನಡ್ಕ ,ಕೆ ಎಂ ಕೆ ಮಂಜನಾಡಿ, ಮೋನು ಕಲ್ಕಟ್ಟ,ಅನ್ವರ್ ಹಾಜಿ ಗೂಡಿನಬಳಿ, ಇಸ್ಮಾಯಿಲ್ ಮಾಸ್ಟರ್ ಮುಗಿಲಪದವು ಹಾಗೂ ರಾಜ್ಯ ಚುಣಾವಣಾ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಬಜ್ಪೆ ಕನ್ವೀನರ್ ಸಾದಿಖ್ ಮಾಸ್ಟರ್,ಸದಸ್ಯರಾದ ಇಸ್ಮಾಹಿಲ್ ಸಅದಿ ಕಿನ್ಯ, ಕಲ್ಕಟ್ಟ ರಝ್ವಿ ಅಶ್ರಫ್ ಕಿನಾರ ಮಂಗಳೂರು, ಅಬ್ದುರ್ರಹ್ಮಾನ್ ಮೊಗರ್ಪಣೆ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿರಿ...