janadhvani

Kannada Online News Paper

SQAY ಎರಡು ದಿನಗಳ ಮಾರ್ಷಲ್ ಆರ್ಟ್ಸ್ ತರಬೇತಿ ಕ್ಯಾಂಪ್

ಮೂಡಬಿದ್ರೆ: ದಿನಾಂಕ 16-17 ಶನಿವಾರ, ಆದಿತ್ಯವಾರ ಸಮಾಜ ಮಂದಿರ ಮೂಡಬಿದ್ರೆ ಡಿಸ್ಟ್ರಿಕ್ಟ್ SQAY ASSOCIATION (R)
Swami’s strength training centre moodbidri ಆಯೋಜಿಸಿದ ರಾಜ್ಯಮಟ್ಟದ SQAY ಮಾರ್ಷಲ್ ಆರ್ಟ್ಸ್ ತರಬೇತಿ ಶಿಬಿರ ಬಹಳ ವಿಜ್ರಂಭಣೆಯಿಂದ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ನಡೆಯಿತು.

ಈ ಎಲ್ಲಾ ಮೆಚ್ಚುಗೆಯ ಹಿಂದೆ ಬಹಳಷ್ಟು ಪರಿಶ್ರಮದಿಂದ ಶ್ರಮಿಸಿದ ಈ ಶಿಬಿರ ಈ ರೂಪದಲ್ಲಿ ನಡೆಯಲು ಕಾರಣಕರ್ತರಾದ ಮುಹಮ್ಮದ್ ನದೀಂ ಸರ್ ( ಅಧ್ಯಕ್ಷರು DK DISTRICT SQAY ASSOCIATION) ಮತ್ತು ಅವರ ತಂಡ. ತರಬೇತುದಾರರಾಗಿ ಆಗಮಿಸಿದ ಮುಹಮ್ಮದ್ ಅಲಿ H.U ದಾವಣಗೆರೆ (ಪ್ರಧಾನ ಕಾರ್ಯದರ್ಶಿ SQAY ASSOCIATION of Karnataka) ತರಬೇತಿ ಕೊಟ್ಟಿದ್ದಾರೆ.

ಎರಡು ದಿನಗಳ ಕಾಲ ಕ್ಯಾಂಪಿನಲ್ಲಿ ಭಾಗವಹಿಸಿದ ಸುಮಾರು 100 ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದಿದ್ದಾರೆ ಎಂದು ಸೆನ್ಸಾಯಿ ಮುಹಮ್ಮದ್ ಹಾರಿಸ್ ಮಾಸ್ಟರ್ ಪತ್ರಿಕೆ ಪ್ರಕಟನೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com