janadhvani

Kannada Online News Paper

ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6ನೇ ಬೃಹತ್ ರಕ್ತದಾನ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ರಕ್ತ ನಿಧಿ ಕೇಂದ್ರಗಳಲ್ಲಿ ಅತೀವ ರಕ್ತದ ಕೊರತೆ ಕಂಡು ಬಂದಿದ್ದು ಜೀವ ಜಲವಾಗಿರುವ ರಕ್ತ ಸಿಗಲು ರೋಗಿಗಳು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಜೀವದಾನಿಗಳಾಗೋಣ ಎಂಬ ದ್ಯೇಯ ವಾಕ್ಯದೊಂದಿಗೆ ರಕ್ತದಾನ ಶಿಬಿರವನ್ನು ದಿನಾಂಕ :- 3 / 10 / 2021 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಪಾಜೆ ಗ್ರಾಮ ಪಂಚಾಯತ್ ಕಲ್ಲುಗುಂಡಿ ಹಾಗೂ ಸಜ್ಜನ ಪ್ರತಿಷ್ಠಾನ ಗೂನಡ್ಕ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ , ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ . ಇದರ 8 ನೇ ರಕ್ತದಾನ ಶಿಬಿರವನ್ನು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜಿ.ಕೆ ಅಬ್ದುಲ್ ಹಮೀದ್ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುತ್ತೇವೆ.


ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ದಕ್ಷಿಣ ಕನ್ನಡ ಇದರ ಸಂಚಾಲಕ ಇಬ್ರಾಹಿಂ ಕರೀಂ ಕದ್ಕರ್,
ಅಧ್ಯಕ್ಷರಾದ ಜಕರಿಯ ನಾರ್ಶ, ಮುಸ್ತಾಫಾ ಕೆ.ಪಿ ಬೈಲ್ , ಸಿದ್ದೀಕ್ ಗೂಣಡ್ಕ ಹಾಗೂ ಸಾಮಾಜಿಕ ರಾಜಕೀಯ ನಾಯಕರು ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ರಕ್ತದಾನ ಮಾಡಿ ಜೀವದಾನಿಗಳಾಗಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ .

ಜಿ.ಕೆ ಹಮೀದ್
ಅಧ್ಯಕ್ಷರು
ಸಂಪಾಜೆ ಗ್ರಾಮ ಪಂಚಾಯತ್ ಕಲ್ಲುಗುಂಡಿ .
ಮೊ :- 9480259912error: Content is protected !! Not allowed copy content from janadhvani.com